ಸರ್ಕಾರ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನ ದೇಶದ ಜನತೆ ಸಮರ್ಪಕವಾಗಿ ಪಾಲಿಸಿದ್ದೇ ಹೌದಾದಲ್ಲಿ ಮುಂದಿನ ವರ್ಷದ ಫೆಬ್ರವರಿ ಅಂತ್ಯದೊಳಗಾಗಿ ಭಾರತದಲ್ಲಿ ಕರೊನಾ ನಿಯಂತ್ರಣಕ್ಕೆ ಬರಲಿದೆ ಅಂತಾ ಸರ್ಕಾರಿ ಆಯೋಗ ತಿಳಿಸಿದೆ.
ಐಐಟಿ ಪ್ರಾಧ್ಯಾಪಕ ಎಂ. ವಿದ್ಯಾಸಾಗರ್ ನೇತೃತ್ವದ ಕಮಿಟಿಯನ್ನ ದೇಶದಲ್ಲಿ ಕರೊನಾ ಏರಿಳಿತಗಳನ್ನ ಅಧ್ಯಯನ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ನೇಮಿಸಿದೆ. ಈ ಕಮಿಟಿಯು ಸರ್ಕಾರಕ್ಕೆ ಕರೊನಾ ನಿಯಂತ್ರಣಕ್ಕೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಸಲಹೆ ಸೂಚನೆಗಳನ್ನ ನೀಡುತ್ತೆ.
ಭಾರತದಲ್ಲಿ ಕೋವಿಡ್ ಹಾಗೂ ಲಾಕ್ಡೌನ್ ಪರಿಣಾಮ ಎಂಬ ವಿಚಾರವಾಗಿ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ಈ ಕಮಿಟಿ ನಡೆಸಿದ್ದ ಅಧ್ಯಯನ ಪ್ರಕಟವಾಗಿತ್ತು. ಇದರಲ್ಲಿ ಲಾಕ್ಡೌನ್ನಿಂದಾದ ಸಾಧಕ ಬಾಧಕ , ವಲಸಿಗರ ಕಾರ್ಮಿಕರ ಮೇಲಾದ ಪರಿಣಾಮ, ದೇಶದ ಆರ್ಥಿಕತೆ ಈ ಎಲ್ಲದರ ಬಗ್ಗೆ ವಿವರಣೆ ನೀಡಲಾಗಿದೆ.
ಭಾರತ ಸೆಪ್ಟೆಂಬರ್ ಮಧ್ಯಭಾಗದಲ್ಲೇ ಅತಿ ಹೆಚ್ಚು ಕರೊನಾ ಕೇಸ್ಗಳನ್ನ ಕಾಣೋಕೆ ಶುರು ಮಾಡಿದೆ. ನಾಗರಿಕರು ಸುರಕ್ಷತಾ ಕ್ರಮಗಳನ್ನ ಸರಿಯಾಗಿ ಅನುಕರಣೆ ಮಾಡಿದ್ರೆ ಮುಂದಿನ ವರ್ಷದ ಆರಂಭದಲ್ಲಿ ಕನಿಷ್ಟ ರೋಗಲಕ್ಷಣದ ಸೋಂಕು ದಾಖಲಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ.