ಗುಜರಾತ್ನ ಬಿಜೆಪಿ ಘಟಕ ಸ್ಥಳೀಯ ಹಾಗೂ ನಾಗರಿಕ ಚುನಾವಣೆಯಲ್ಲಿ ಪಕ್ಷದಿಂದ ನೀಡಲಾಗುವ ಟಿಕೆಟ್ನ್ನ ಪಡೆಯಬೇಕು ಅಂದರೆ ಕೆಲ ಮಾನದಂಡಗಳನ್ನ ವಿಧಿಸಿದೆ.
ಇದರನ್ವಯ 60 ವರ್ಷಕ್ಕಿಂತ ಮೇಲ್ಪಟ್ಟವರು, ಮೂರು ಬಾರಿ ಚುನಾವಣೆಯಲ್ಲಿ ಆಯ್ಕೆಯಾದವರು ಹಾಗೂ ರಾಜಕಾರಣಿಗಳ ಸಂಬಂಧಿಗಳಿಗೆ ಬಿಜೆಪಿ ಟಿಕೆಟ್ ಸಿಗೋದಿಲ್ಲ ಎಂದು ಹೇಳಿದೆ. ಈ ಬಗ್ಗೆ ಸ್ವತಃ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 7 ಮೆಗಾ ಜವಳಿ ಪಾರ್ಕ್, ಲಕ್ಷಾಂತರ ಮಂದಿಗೆ ಕೆಲಸದ ಭರವಸೆ
ಮುಂಬರುವ ಮುನ್ಸಿಪಾಲ್ ಕಾರ್ಪೋರೇಷನ್ ಚುನಾವಣೆ ಸಂಬಂಧ ನಡೆಸಲಾದ ಸಭೆಯಲ್ಲಿ ಬಿಜೆಪಿ ಮುಖಂಡರು ಈ ನಿರ್ಧಾರವನ್ನ ಕೈಗೊಂಡಿದ್ದಾರೆ.
ಗುಜರಾತ್ ಸಿಎಂ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಿಎಂ ವಿಜಯ್ ರೂಪಾಣಿ ಕೂಡ ಭಾಗಿಯಾಗಿದ್ರು. ತಾಲೂಕು, ಜಿಲ್ಲೆ, ಮುನ್ಸಿಪಾಲಿಟಿ ಹಾಗೂ ಕಾರ್ಪೋರೇಷನ್ ಚುನಾವಣೆಗೆ ಬಿಜೆಪಿ ಒಟ್ಟು 8 ಸಾವಿರ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಿದೆ.
ಸ್ಥಳೀಯ ಚುನಾವಣೆಗೆ ಗುಜರಾತ್ನ ಚುನಾವಣಾ ಆಯೋಗ ಈಗಾಗಲೇ ದಿನಾಂಕ ನಿಗದಿ ಮಾಡಿದೆ. ಮುನ್ಸಿಪಲ್ ಕಾರ್ಪೋರೇಷನ್ಗೆ ಫೆಬ್ರವರಿ 21 ಹಾಗೂ ಮುನ್ಸಿಪಾಲಿಟಿ, ಪಂಚಾಯತ್ಗೆ ಫೆಬ್ರವರಿ 28ರಂದು ಚುನಾವಣೆ ನಡೆಯಲಿದೆ. ಮುನ್ಸಿಪಾಲ್ ಕಾರ್ಪೋರೇಷನ್ ಮತ ಎಣಿಕೆ ಫೆಬ್ರವರಿ 23ರಂದು ಹಾಗೂ ಪಂಚಾಯತ್, ಮುನ್ಸಿಪಾಲಿಟಿ ಮತ ಎಣಿಕೆ ಮಾರ್ಚ್ 2ರಂದು ನಡೆಯಲಿದೆ.