ಮುಂಬೈ: ಕಿಶೋರ್ ಕುಮಾರ್ ಭಾರತೀಯ ಚಿತ್ರ ರಂಗದ ಅತ್ಯಂತ ಪ್ರಸಿದ್ಧ ಹೆಸರು. ಕೋಟ್ಯಂತರ ಅಭಿಮಾನಿಗಳು ಅವರಿಗಿದ್ದಾರೆ. ಅವರು ಹಾಡಿದ ಬೆಂಗಾಲಿ ಹಾಡು ಈಗ ಯು ಟ್ಯೂಬ್ ನಲ್ಲಿ ಮತ್ತೆ ಪ್ರಸಿದ್ಧವಾಗಿದೆ.
ಎನ್ ಕೆ ನಾಗ್ ಎಂದು ಪ್ರಸಿದ್ಧರಾದ ನಗುಕವಿ ನಾಗ್ ಅವರು ಕಿಶೋರ್ ಕುಮಾರ್ ಅವರ 1958 ರ ಲುಕೊಚುರಿ ಬೆಂಗಾಲಿ ಚಿತ್ರದ ಹಾಡು ಶಿಂಗ್ ನೈ ತೋಬು ನಾಮಾತಾರ್ ಶಿಂಗಾವನ್ನು ಈಗ ಹಾಡಿದ್ದಾರೆ.
ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡಲು ಗಂಡನಿಂದ ಹಿಂಸೆ; ದುಡುಕಿದ ಪತ್ನಿ
ಬೆಂಗಾಲಿಯವರಲ್ಲದಿದ್ದರೂ ಎನ್.ಕೆ. ನಾಗ್ ಹಾಡಿದ ಈ ಹಾಡು ಸಖತ್ ಪ್ರಸಿದ್ಧವಾಗಿದೆ. ಅವರು ಯು ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದು, 21.4 ಸಾವಿರ ಜನ ವೀಕ್ಷಿಸಿದ್ದಾರೆ. ನೆಟ್ಟಿಗರು ಇವರ ಹಾಡಿಗೂ ಮನಸೋತಿದ್ದಾರೆ.