ಜಗತ್ತಿನಾದ್ಯಂತ ಇರುವ ಸಣ್ಣ-ಪುಟ್ಟ ಪ್ರತಿಭೆಗಳಿಗೆ ವೇದಿಕೆ ಹಾಕಿಕೊಡುತ್ತಿದೆ ಅಂತರ್ಜಾಲ.
ದೆಹಲಿಯ ಬಾಬಾ-ಕಾ-ಢಾಬಾ ಖ್ಯಾತಿಯ ಬಳಿಕ ಅಂಥದ್ದೇ ಒಂದಷ್ಟು ಸಣ್ಣ ಪುಟ್ಟ ತಿಂಡಿ ಸ್ಟಾಲ್‌ಗಳನ್ನು ನಡೆಸುವ ಮಂದಿ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿ ಅವರ ಬದುಕಿಗೊಂದು ಹೊಸ ತಿರುವು ಸಿಕ್ಕಿದೆ.
ಇಂಥದ್ದೇ ಮತ್ತೊಂದು ಘಟನೆಯಲ್ಲಿ, ಮುಂಬೈಯಲ್ಲಿ ಲಿಟ್ಟಿ ಚೋಕಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಬಗ್ಗೆ ಟ್ವಿಟರ್ ಬಳಕೆದಾರರೊಬ್ಬರು ಜಗತ್ತಿಗೆ ಪರಿಚಯಿಸಿದ್ದಾರೆ. ಈತನನ್ನು ಫುಡ್ ಡೆಲಿವರಿ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಸೇರಿಸಲು ನೆರವಾಗಲು ಕೋರಿರುವ ಪ್ರಿಯಾಂಶು ದ್ವಿವೇದಿ ಮೈಕ್ರೋಬ್ಲಾಗಿಂಗ್ ತಾಣದಲ್ಲಿ ಕೋರಿಕೊಂಡಿದ್ದಾರೆ.
ವರ್ಸೋವಾ ಬೀಚ್ ಬಳಿ ಲಿಟ್ಟಿ-ಚೋಕಾ ಮಾರಾಟ ಮಾಡುವ ಯೋಗೇಶ್‌ರನ್ನು ಪರಿಚಯಿಸಿದ ಪ್ರಿಯಾಂಶು, ತಂತ್ರಜ್ಞಾನದ ಅರಿವು ಕಡಿಮೆ ಇರುವ ಕಾರಣ ಜೊಮ್ಯಾಟೋ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವರ ಆಸೆ ಫಲಿಸದೇ ಇದ್ದ ವಿಷಯ ತಿಳಿಸಿದ್ದು, ಅವರು ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿದ್ದಾರೆ ಎಂದು ಹೇಳಿದ್ದರು.
‘ಚಾರ್ಮಡಿ ಘಾಟ್’ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ
“ಈತ ನಮ್ಮೂರಿನಲ್ಲಿ ಲಿಟ್ಟಿ-ಚೋಕಾ ಮಾರಾಟ ಮಾಡುತ್ತಿದ್ದಾರೆ ಅದೂ ಒಂದು ಪ್ಲೇಟ್‌ಗೆ ಬರೀ 20 ರೂ.ಗಳ ಬೆಲೆಯಲ್ಲಿ. ಜೊಮ್ಯಾಟೋ ಮೂಲಕ ತಮ್ಮ ಲಿಟ್ಟಿ-ಚೋಕಾ ಮಾರಾಟ ಮಾಡಲು ನೋಡುತ್ತಿದ್ದಾರೆ ಆದರೆ, ಇದಕ್ಕೆ ಬೇಕಾದ ಪ್ರಕ್ರಿಯೆ ಬಗ್ಗೆ ಅರಿವಿನ ಕೊರತೆಯ ಕಾರಣ ಅದು ಫಲಿಸುತ್ತಿಲ್ಲ ಹಾಗೂ ಯಾರನ್ನು ಸಂಪರ್ಕಿಸಬೇಕೆಂದು ತಿಳಿಯುತ್ತಿಲ್ಲ. ತಾನೀಗ ಆರ್ಥಿಕ ಮುಗ್ಗಟ್ಟಿನಲ್ಲಿರುವುದಾಗಿ ಆತ ಹೇಳಿಕೊಂಡಿದ್ದಾರೆ” ಎಂದು ಪ್ರಿಯಾಂಶು ತಿಳಿಸಿದ್ದಾರೆ.
“ಅವರು ತಮ್ಮ ಶಾಪ್ ಮುಚ್ಚುವ ಯೋಚನೆಯಲ್ಲಿದ್ದಾರೆ. ಇಷ್ಟು ರುಚಿಯಾದ ಲಿಟ್ಟಿ ಎಲ್ಲೂ ಸಿಗೋದಿಲ್ಲ ಎಂದು ನಾನು ಮಾತು ಕೊಡುತ್ತೇನೆ. ಅವರಿಗೆ ಒಂದು ಪ್ಲಾಟ್‌ಫಾರಂ ಕೊಡಬೇಕೆಂದು ನಾನು ಜೊಮ್ಯಾಟೋ ಹಾಗೂ ದೀಪಿ ಗೋಯೆಲ್‌ರನ್ನು ವಿನಂತಿಸುತ್ತೇನೆ” ಎಂದು ಸಹ ಕೋರಿಕೊಂಡಿದ್ದಾರೆ ಪ್ರಿಯಾಂಶು.
ಪ್ರಿಯಾಂಶುರ ಈ ಟ್ವೀಟ್ ವೈರಲ್ ಆಗಿ, ಯೋಗೇಶ್‌ರನ್ನು ಹುಡುಕಿಕೊಂಡು ಹೋಗಿ ಅವರ ಕೈರುಚಿಯ ಲಿಟ್ಟಿ ಸವಿದ ಒಂದಷ್ಟು ನೆಟ್ಟಿಗರು ಖುದ್ದು ತಮ್ಮ ಅನುಭವವನ್ನು ಸಹ ಆ ಟ್ವೀಟ್‌ಗೆ ಪ್ರತಿಕ್ರಿಯೆಯ ಮೂಲಕ ಹೇಳಿಕೊಂಡಿದ್ದಾರೆ.
ಈ ವಿಷಯ ಹೀಗೇ ಜೊಮ್ಯಾಟೋಗೆ ಮುಟ್ಟಿದೆ. ಜೊಮ್ಯಾಟೋದ ಸಾಮಾಜಿಕ ಜಾಲತಾಣದ ಪ್ರತಿನಿಧಿ ಟ್ವೀಟ್ ಮಾಡಿದ್ದು ಯೋಗೇಶ್‌ರ ಸಂಪರ್ಕ ಸಂಖ್ಯೆಯನ್ನು ಕೊಟ್ಟಲ್ಲಿ ಅವರನ್ನು ಕೂಡಲೇ ತಲುಪಿ ಅವರನ್ನು ತನ್ನ ಲಿಸ್ಟಿಂಗ್‌ನಲ್ಲಿ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.