ನವದೆಹಲಿ: ಹೊಸ ವಾಹನ ಮಾಲೀಕರು ಆಗಸ್ಟ್ 1ರಿಂದ ಹೊಸ ವಿಮೆ ರಕ್ಷಣೆಯನ್ನು ಖರೀದಿಸಬೇಕಾಗುತ್ತದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐ.ಆರ್.ಡಿ.ಎ.ಐ.) ಆಗಸ್ಟ್ 1 ರಿಂದ ಹೊಸ ವಾಹನ ಮಾಲೀಕರಿಗೆ ದೀರ್ಘಾವಧಿಯ ಮೋಟಾರು ವಿಮಾ ಪ್ಯಾಕೇಜ್ ಮಿತಿ ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಕಂಪನಿಗಳಿಗೆ ನಿರ್ದೇಶನ ನೀಡಿದೆ.
ಅಂತೆಯೇ ಹೊಸ ವಾಹನದ ಆನ್ ರೋಡ್ ಬೆಲೆ ಜೊತೆಗೆ ಹೊಸ ವಾಹನ ಖರೀದಿಸುವ ಗ್ರಾಹಕರು ಇನ್ನು ಮುಂದೆ ದೀರ್ಘಾವಧಿಯ ವಿಮಾ ಪಾಲಿಸಿಯನ್ನು ಖರೀದಿಸಬೇಕಿಲ್ಲ. ಕಾರ್ ಗಳಿಗೆ ಮೂರು ವರ್ಷದ, ದ್ವಿಚಕ್ರ ವಾಹನಗಳಿಗೆ 5 ವರ್ಷ ವಿಮೆ ಹೊಂದಿರುವ ಮಾಲೀಕರಿಗೆ ಇದು ಅನ್ವಯವಾಗುತ್ತದೆ.
ಆಗಸ್ಟ್ 1 ರಿಂದ ವಾಹನಕ್ಕೆ ಹಾನಿ ಮತ್ತು ಮೂರನೇ ವ್ಯಕ್ತಿಗೆ ಆಗುವ ಹಾನಿ ಒಳಗೊಂಡಿರುವ ದೀರ್ಘಾವಧಿಯ ಸಮಗ್ರ ಮೋಟರು ವಿಮೆಯನ್ನು ಕಾರ್ ಗಳಿಗೆ 3 ವರ್ಷ, ದ್ವಿಚಕ್ರ ವಾಹನಗಳಿಗೆ 5 ವರ್ಷ ರದ್ದುಗೊಳಿಸಲಾಗಿದೆ.
ಹೊಸ ವಾಹನ ಖರೀದಿದಾರರಿಗೆ ಈ ಕ್ರಮದಿಂದ ಅನುಕೂಲವಾಗಲಿದೆ. ಹೊಸ ವಾಹನ ಖರೀದಿಸುವ ಸಂದರ್ಭದಲ್ಲಿ ಒಂದೇ ಬಾರಿಗೆ ದೊಡ್ಡ ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕಾಗಿಲ್ಲ. ವಿಮೆದಾರರಿಗೆ ಇದರಿಂದ ಅನುಕೂಲವಾಗುತ್ತದೆ. ಹೊಸ ವಾಹನ ಖರೀದಿಸುವಾಗ ಮುಂಗಡ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.