ವರ್ಷಾಂತ್ಯದೊಳಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಹೊಸ ಕೊರೊನಾ ಲಸಿಕೆಗಳು ಬಳಕೆಗೆ ಬರಲಿದ್ದು ಇವಕ್ಕೆ ಸೂಜಿಗಳಾಗಲಿ ಹಾಗೂ ಇವುಗಳನ್ನ ಸಂಗ್ರಹಿಸಲು ಕೋಲ್ಡ್ ಸ್ಟೋರೇಜ್ಗಳ ಅವಶ್ಯಕತೆಯಾಗಲಿ ಇರೋದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಮಾಹಿತಿ ನೀಡಿದ್ದಾರೆ.
6 – 8 ಔಷಧಿ ತಯಾರಕ ಸಂಸ್ಥೆಗಳು ಈ ವರ್ಷದ ಅಂತ್ಯದಲ್ಲಿ ಪ್ರಯೋಗಾತ್ಮಕ ಪರೀಕ್ಷೆಗಳನ್ನ ಪೂರ್ಣಗೊಳಿಸಲಿವೆ ಎಂದು ಜೆನೆವಾ ಮೂಲದ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಮಾಹಿತಿ ನೀಡಿದ್ರು.
ಕೊರೊನಾ ವೈರಸ್ನ್ನು ಮಹಾಮಾರಿ ಎಂದು ಘೋಷಣೆ ಮಾಡಿದ ವರ್ಷದ ಒಳಗೇ ಹಲವು ಲಸಿಕೆಗಳು ಬಳಕೆಗೆ ಬಂದಿವೆ. ಆದರೆ ಜಗತ್ತಿಗೆ ಇನ್ನೂ ಹೆಚ್ಚಿನ ರೋಗ ನಿರೋಧಕದ ಅವಶ್ಯಕತೆ ಇದೆ. ಕೊರೊನಾ ವೈರಸ್ ರೂಪಾಂತರಗೊಳ್ಳುವ ಅಪಾಯ ಇರೋದ್ರಿಂದ ಔಷಧಿ ತಯಾರಕರಿಗೆ ಇದೊಂದು ಸವಾಲಾಗಿದೆ. ಬ್ಲೂಮ್ಬರ್ಗ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಕೇವಲ 122 ರಾಷ್ಟ್ರಗಳು ಮಾತ್ರ ತಮ್ಮ ಜನತೆಯ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಪ್ರಯತ್ನ ಮಾಡ್ತಿದೆ.
‘ಗರ್ಭಧಾರಣೆ’ ತಡವಾಗ್ತಿದೆಯಾ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್
ನಮ್ಮಲ್ಲಿರುವ ಲಸಿಕೆಗಳನ್ನ ನೋಡ್ತಿದ್ರೆ ನಮಗೆ ಆಶ್ಚರ್ಯವಾಗುತ್ತೆ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಸೌಮ್ಯ ಸ್ವಾಮಿನಾಥನ್ ಭಾರತೀಯ ಶಿಶುವೈದ್ಯೆಯಾಗಿದ್ದು ಕ್ಷಯರೋಗ ಹಾಗೂ ಹೆಚ್ಐವಿ ಕುರಿತಾದ ವಿವಿಧ ಸಂಶೋಧನೆಗಳ ಮೂಲಕ ಹೆಸರುವಾಸಿಯಾಗಿದ್ದಾರೆ.
ಲಸಿಕೆಗಳ ವಿಚಾರದಲ್ಲಿ ನಾವಿನ್ನೂ ಸುಧಾರಿಸಿಕೊಳ್ಳಬೇಕಾಗಿರೋದು ಸಾಕಷ್ಟಿದೆ. ನನ್ನ ಪ್ರಕಾರ 2022ರ ಹೊತ್ತಿಗೆ ಸುಧಾರಣೆಗೊಂಡ ಲಸಿಕೆಗಳನ್ನ ನಾವು ಹೊಂದಲಿದ್ದೇವೆ ಎಂದು ಹೇಳಿದ್ರು.