ಆಯಸ್ಸು ಗಟ್ಟಿಯಾಗಿದ್ರೆ ಯಮನಿಂದ ಕೂಡ ಏನು ಮಾಡೋಕೂ ಸಾಧ್ಯವಿಲ್ಲ ಎಂಬ ಮಾತಿದೆ. ಇದಕ್ಕೆ ಈ ನವಜಾತ ಶಿಶು ಉತ್ತಮ ನಿದರ್ಶನ. ಮಣ್ಣಿನ ಅಡಿ ಹೂತಿದ್ದ ಮಗು ಬದುಕಿ ಬಂದಿದೆ. ಈ ಘಟನೆ ನಡೆದಿರೋದು ಜಾರ್ಖಂಡ್ನ ಲೋಹರ್ದಾಗ ಜಿಲ್ಲೆಯಲ್ಲಿ.
ದಾರಿಯಲ್ಲಿ ಹೋಗ್ತಿದ್ದ ವ್ಯಕ್ತಿಯೊಬ್ಬರಿಗೆ ಮಗು ಅಳುವ ಶಬ್ಧ ಕೇಳಿದೆ. ಎಲ್ಲಿಂದ ಎಂದು ಪತ್ತೆ ಹಚ್ಚಿದಾಗ ಆತ ಕಂಗಾಲಾಗಿದ್ದಾನೆ. ಮಗು ಅಳುವ ಶಬ್ಧ ಮಣ್ಣಿನ ಕೆಳಗೆ ಕೇಳಿ ಬಂದಿತ್ತು. ನವಜಾತ ಶಿಶುವನ್ನು ಯಾರೂ ಜೀವಂತವಾಗಿ ಮಣ್ಣಿನಲ್ಲಿ ಹೂಳಿದ್ದರು. ಗ್ರಾಮಸ್ಥರನ್ನು ಒಟ್ಟುಗೂಡಿಸಿ ಮಣ್ಣು ತೆಗೆದು ಮಗುವನ್ನು ರಕ್ಷಿಸಲಾಗಿದೆ.
ಮಗು ಆರೋಗ್ಯವಾಗಿದೆ. ಇಂಥ ನೀಚ ಕೆಲಸ ಮಾಡಿದವರ ಪತ್ತೆ ಕಾರ್ಯ ನಡೆಯುತ್ತಿದೆ. ಮಗು ದತ್ತು ಪಡೆಯಲು ಅನೇಕರು ಮುಂದೆ ಬಂದಿದ್ದಾರೆ ಎನ್ನಲಾಗಿದೆ.