ಕೋವಿಡ್ ಸಾಂಕ್ರಾಮಿಕ ಅನೇಕರ ಜೀವ ತೆಗೆದಿದೆ, ಇದೇ ವೇಳೆ ಜೀವರಕ್ಷಕ ವಾಗಿ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆದರೆ ಪ್ಲಾಸ್ಮಾ ದಾನ ಮಾಡಲು ಅನೇಕರು ಹಿಂದೇಟು ಹೊಡೆಯುತ್ತಿದ್ದಾರೆ. ಈ ನಡುವೆ ಇಲ್ಲೊಬ್ಬ ವ್ಯಕ್ತಿ 14 ಬಾರಿ ಪ್ಲಾಸ್ಮಾ ದಾನ ಮಾಡಿದ್ದು, 15ನೇ ಬಾರಿ ದಾನ ಮಾಡಲು ತಯಾರಾಗಿ ಗಮನ ಸೆಳೆದಿದ್ದಾರೆ.
ಪುಣೆಯ ಅಜಯ್ ಮುನೊಟ್ ಎಂಬ 50 ವರ್ಷದ ವ್ಯಕ್ತಿ 14 ಬಾರಿ ಪ್ಲಾಸ್ಮಾ ದಾನ ಮಾಡಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಪ್ರಮಾಣಪತ್ರ ಸಹ ಪಡೆದರು. ಅವರು ಗರಿಷ್ಠ ಸಂಖ್ಯೆಯಲ್ಲಿ ಪ್ಲಾಸ್ಮಾ ದಾನ ಮಾಡಿದ ದೇಶದ ಮೊದಲ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ.
ಮಗುವಿನ ಬಾಯಲ್ಲಿ ರಂಧ್ರವಿದೆ ಎಂದು ಭಾವಿಸಿ ಮುಜುಗರಕ್ಕೀಡಾದ ತಾಯಿ….!
2020 ರ ಜೂನ್‌ನಲ್ಲಿ ಅವರು ಕೋವಿಡ್ ವೈರಸ್‌ಗೆ ತುತ್ತಾದರು. ಚೇತರಿಸಿಕೊಂಡ ತಕ್ಷಣ ಅವರು ತಮ್ಮ ಪ್ಲಾಸ್ಮಾ ದಾನ ಮಾಡಲು ಬಯಸಿ ಅನೇಕರ ಜೀವ ಉಳಿಸಿದ್ದಾರೆ.
ನಾನು 14 ಬಾರಿ ಪ್ಲಾಸ್ಮಾ ದಾನ ಮಾಡಿದ್ದರೂ ಎಂದಿಗೂ ದುರ್ಬಲನಾಗಿಲ್ಲ, ಆತಂಕವೂ ಆಗಿಲ್ಲ. ಪ್ಲಾಸ್ಮಾ ದಾನದ ಸಮಯದಲ್ಲಿ ರಕ್ತವನ್ನು ಹೊರತೆಗೆಯಲಾಗುತ್ತದೆ ಎಂಬ ತಪ್ಪು ಕಲ್ಪನೆ ಜನರಿಗೆ ಇದೆ ಎಂದು ಅಜಯ್ ಹೇಳಿದ್ದಾರೆ.