alex Certify ಮುಂಬೈ ಪೊಲೀಸರ ಹೊಸ ನಿಯಮ; ಜನರಿಗೆ ಪರದಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ ಪೊಲೀಸರ ಹೊಸ ನಿಯಮ; ಜನರಿಗೆ ಪರದಾಟ

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಏರುತ್ತಿರುವ ನಡುವೆ, ಮುಂಬೈನಲ್ಲಿ ದಾಖಲೆಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಮುಂಬೈನ್ನು ಅನ್‌ಲಾಕ್‌ ಮಾಡುವುದಕ್ಕೆ ಮಹಾರಾಷ್ಟ್ರ ಸರಕಾರ ಮುಂದಾಗಿದೆ. ಆದರೆ ರಾಜ್ಯ ಸರಕಾರ ವಿಧಿಸಿರುವ ಕೆಲ ಷರತ್ತುಗಳು ಇದೀಗ ನೆಟ್ಟಿಗರನ್ನು ಗೊಂದಲಕ್ಕೆ ದೂಡಿದೆ.

ಹೌದು, ಮುಂಬೈನಲ್ಲಿ ಅನ್‌ ಲಾಕ್‌ ಮಾರ್ಗಸೂಚಿಯಲ್ಲಿ ಪ್ರಮುಖವಾಗಿ ಎರಡು ಕಿ.ಮೀ. ಸುತ್ತಳತೆಯೊಳಗೆ ಮಾತ್ರ ವಾಹನಗಳನ್ನು ಬಳಸಬಹುದು. ಯಾವುದೇ ರಾಜ್ಯದ ವಾಹನವಾದರೂ ಈ ನಿಯಮ ಕಡ್ಡಾಯ. ಒಂದು ವೇಳೆ ನಿಗದಿತ ವಿಸ್ತೀರ್ಣಕ್ಕಿಂತ ದೂರದ ಪ್ರದೇಶಕ್ಕೆ ವಾಹನಗಳನ್ನು ಬಳಸಿದರೆ, ಈ ರೀತಿಯ ವಾಹನವನ್ನು ಜಫ್ತಿ ಮಾಡುವ ಎಚ್ಚರಿಕೆಯನ್ನು ಸ್ಥಳೀಯ ಪೊಲೀಸರು ನೀಡಿದ್ದಾರೆ. ಅನ್‌ಲಾಕ್‌ 1.0 ದ ಈ ಮಾರ್ಗಸೂಚಿಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದು, ಈ ರೀತಿ ಮಾಡುವುದರಿಂದ ಕೊರೋನಾ ನಿಯಂತ್ರಣಕ್ಕಿಂತ ಜನರಿಗೆ ಕಿರಿಕಿರಿ ಮಾತ್ರ ಆಗುತ್ತದೆ ಎಂದಿದ್ದಾರೆ.

ಮುಂಬೈ ಪೊಲೀಸರ ಈ ಟ್ವೀಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದು, ಈ ರೀತಿಯ ನಿಯಮದಿಂದ ಹಿರಿಯ ನಾಗರಿಕರು ಇರುವ ಮನೆಯಲ್ಲಿ ಭಾರಿ ಸಮಸ್ಯೆಯಾಗಲಿದೆ. ಇನ್ನು ಕೆಲವರು ನಾವು ಅಗತ್ಯ ಸಾಮಗ್ರಿಗಳನ್ನು ತರುವುದಕ್ಕೆ ಎರಡು ಕಿ.ಮೀ.ಗಿಂತ ದೂರ ಇರುವ ಪ್ರದೇಶಕ್ಕೆ ಹೋಗಬೇಕಾಗುತ್ತದೆ. ಈ ಹಂತದಲ್ಲಿ ಏನು ಮಾಡಬೇಕು? ನಡೆದುಕೊಂಡು ಹೋಗಬೇಕೇ ಎಂದು ಪ್ರಶ್ನಿಸಿದ್ದಾರೆ.

https://twitter.com/MumbaiPolice/status/1277215558203699203?ref_src=twsrc%5Etfw%7Ctwcamp%5Etweetembed%7Ctwterm%5E1277215558203699203%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fnetizens-in-a-circle-of-confusion-as-mumbai-police-restrict-movement-beyond-2-km-radius%2F613489

https://twitter.com/rahulgore/status/1277236198642049025?ref_src=twsrc%5Etfw%7Ctwcamp%5Etweetembed%7Ctwterm%5E1277236198642049025%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fnetizens-in-a-circle-of-confusion-as-mumbai-police-restrict-movement-beyond-2-km-radius%2F613489

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...