ಕಳೆದ ರಾತ್ರಿ ಪ್ರಕಟವಾದ ನೀಟ್ ಪರೀಕ್ಷೆಯಲ್ಲಿ 720ಕ್ಕೆ 720 ಅಂಕ ಪಡೆಯೋ ಮೂಲಕ ಓಡಿಶಾದ ಶೋಯೆಬ್ ಅಫ್ತಬ್ ರಾಷ್ಟ್ರಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಆದರೆ ಇದೇ ರೀತಿ ಔಟ್ ಆಫ್ ಔಟ್ ಅಂಕ ಪಡೆದಿದ್ದರೂ ಕೂಡ ದೆಹಲಿಯ ಆಕಾಂಕ್ಷಾ ಸಿಂಗ್ ಪ್ರಥಮ ಸ್ಥಾನದಿಂದ ವಂಚಿತರಾಗಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ನೀಟ್ ಬೋರ್ಡ್, ಎಷ್ಟು ಅಂಕಗಳನ್ನ ಪಡೆದಿದ್ದಾರೆ ಅನ್ನೋದನ್ನ ಆಧರಿಸಿ ರ್ಯಾಂಕ್ ನೀಡಲಾಗುತ್ತೆ. ಆದರೆ ರ್ಯಾಂಕ್ ಸಮನಾಗಿ ಬಂದ ಸಂದರ್ಭದಲ್ಲಿ ಅಭ್ಯರ್ಥಿಗಳ ವಯಸ್ಸನ್ನ ನೋಡಲಾಗುತ್ತೆ,. ಅಫ್ತಬ್ ಗಿಂತ ಆಕಾಂಕ್ಷಾ ಸಿಂಗ್ ವಯಸ್ಸಿನಲ್ಲಿ ಕಿರಿಯರಾದ ಕಾರಣ ಅವರಿಗೆ ಪ್ರಥಮ ರ್ಯಾಂಕ್ ಕೈತಪ್ಪಿದೆ ಅಂತಾ ಸ್ಪಷ್ಟನೆ ನೀಡಿದೆ.