alex Certify ಇ-ಪಾಸ್‌ ಕೋರಿದವನು ಕೊಟ್ಟ ಕಾರಣ ನೋಡಿ ಹೌಹಾರಿದ ಪೊಲೀಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇ-ಪಾಸ್‌ ಕೋರಿದವನು ಕೊಟ್ಟ ಕಾರಣ ನೋಡಿ ಹೌಹಾರಿದ ಪೊಲೀಸ್…!

ದೇಶಾದ್ಯಂತ ಕೊರೊನಾ ಪ್ರಕರಣ ಹೆಚ್ಚುತ್ತಿರುವಂತೆಯೇ ಅಲ್ಲಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಅನಿವಾರ್ಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರಯಾಣ ಮಾಡಲು ಇ- ಪಾಸ್ ವಿತರಿಸಲಾಗುತ್ತಿದೆ. ಕೇರಳದಲ್ಲಿ ಈ ಪಾಸ್ ಪಡೆಯಲು ವ್ಯಕ್ತಿಯೊಬ್ಬ ವಿಚಿತ್ರ ಕಾರಣ ನೀಡಿ ಸುದ್ದಿಯಾಗಿದ್ದಾನೆ.

ಕಣ್ಣೂರಿನ ಕಣ್ಣಪುರಂನ ಇರಿನಾವೆ ನಿವಾಸಿಯೊಬ್ಬರು ತಮ್ಮ ಇ-ಪಾಸ್ ಅರ್ಜಿಯಲ್ಲಿ ಸಂಜೆ ಕಣ್ಣೂರಿನ ಒಂದು ಸ್ಥಳಕ್ಕೆ “ಸೆಕ್ಸ್‌ ಗೆ ಹೋಗಬೇಕೆಂದು” ಬಯಸಿ ಕೋರಿಕೆ ಸಲ್ಲಿಸಿದ್ದರು. ಈ ಕೋರಿಕೆ ನೋಡಿ ಹೌಹಾರಿದ ಪೊಲೀಸರು ಮೇಲಾಧಿಕಾರಿಗಳ ಗಮನಕ್ಕೂ ತಂದರು.

ಶಾಕಿಂಗ್​: ಮೈಸೂರಿನಲ್ಲಿಯೂ ಪತ್ತೆಯಾಯ್ತು ಮಾರಕ ಬ್ಲಾಕ್​ ಫಂಗಸ್​….!

ಬಳಿಕ ಈ ವಿಚಿತ್ರ ಬೇಡಿಕೆಯಿಟ್ಟ ವ್ಯಕ್ತಿಯನ್ನು ಪತ್ತೆ ಮಾಡಲು ವಾಲಪಟ್ಟಣಂ ಪೊಲೀಸರಿಗೆ ಸೂಚನೆ ನೀಡಲಾಯಿತು. ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಮತ್ತು ಅರ್ಜಿಯಲ್ಲಿ ಉಲ್ಲೇಖಿಸಲಾದ ಕಾರಣದ ಬಗ್ಗೆ ಪ್ರಶ್ನಿಸಿದಾಗ, ನಿಜ ಸಂಗತಿ ಗೊತ್ತಾಗಿ ಪೊಲೀಸರು ತಬ್ಬಿಬ್ಬಾದರು.

ಅಷ್ಟಕ್ಕೂ ಆತ, ಆ ಸಮಯದಲ್ಲಿ ಹೊರಗೆ ಹೋಗಲು ಬಯಸಿದ್ದರಿಂದ “ಆರು ಗಂಟೆ” ಬರೆಯಲು ಉದ್ದೇಶಿಸಿದ್ದ. ಸಿಕ್ಸ್ ಎಂದು ಬರೆಯುವ ಬದಲು ಸೆಕ್ಸ್ ಎಂದಾಗಿತ್ತು. ಈ ದೋಷ ಅರಿತುಕೊಳ್ಳದೆ ಅರ್ಜಿ ಸಲ್ಲಿಸಿದ್ದ. ಕೋರಿಕೆಯಲ್ಲಿ ಉಲ್ಲೇಖವು ತಪ್ಪಾಗಿರುವುದರಿಂದ ಪೊಲೀಸರು ಆತನನ್ನು ಬಿಡುಗಡೆ ಮಾಡಿದರು. ಆ ವ್ಯಕ್ತಿ ತನ್ನ ದೋಷಕ್ಕೆ ಕ್ಷಮೆಯಾಚಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...