ಅಮರಾವತಿ: ಆಂಧ್ರಪ್ರದೇಶ ಶಿಕ್ಷಣ ಇಲಾಖೆ ವತಿಯಿಂದ 43 ಲಕ್ಷ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ, ಸ್ಕೂಲ್ ಬ್ಯಾಗ್, ಪುಸ್ತಕಗಳನ್ನು ವಿತರಿಸಲು 650 ಕೋಟಿ ರೂಪಾಯಿ ಅನುದಾನ ವಿನಿಯೋಗಿಸಲಾಗಿದೆ.
ಅಕ್ಟೋಬರ್ 8 ರ ಇಂದಿನಿಂದ ಯೋಜನೆ ಆರಂಭವಾಗಲಿದೆ. ಆಂಧ್ರ ಸಿಎಂ ಜಗನಮೋಹನ್ ರೆಡ್ಡಿ ಅವರ ಮಹತ್ವಾಕಾಂಕ್ಷಿಯ ‘ವಿದ್ಯಾ ಕನುಕಾ’ ಯೋಜನೆಯಡಿ 10ನೇ ತರಗತಿವರೆಗಿನ ಸರ್ಕಾರಿ ಶಾಲೆ, ಅನುದಾನಿತ, ವಸತಿ ಶಾಲೆಗಳ ಎಲ್ಲ ಮಕ್ಕಳಿಗೆ ಕಿಟ್ ನೀಡಲಾಗುವುದು.
ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ನೋಟ್ ಪುಸ್ತಕ, 3 ಜೊತೆ ಸಮವಸ್ತ್ರ, ಎರಡು ಜೊತೆ ಸಾಕ್ಸ್, ಶೂ ಉಚಿತವಾಗಿ ನೀಡಲಾಗುವುದು. ಕೃಷ್ಣಾ ಜಿಲ್ಲೆಯ ಕಂಕಿಪಾಡು ಮಂಡಲದ ಪುನಾದಿಪಡು ಸರ್ಕಾರಿ ಶಾಲೆಯಲ್ಲಿ ವಿದ್ಯಾ ಕನುಕಾ ಯೋಜನೆ ಔಪಚಾರಿಕವಾಗಿ ಆರಂಭವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ ಎಂದು ಆಂಧ್ರಪ್ರದೇಶ ಶಿಕ್ಷಣ ಸಚಿವ ಆದಿಮುಲಾಪು ಸುರೇಶ್ ಹೇಳಿದ್ದಾರೆ.