ಚೆನ್ನೈನ ಕೋವಿಡ್-19 ಪ್ರಕರಣಗಳ ಏರಿಕೆಯಲ್ಲಿ ಗಣನೀಯ ಇಳಿಕೆ ಕಂಡು ಬರುತ್ತಿದ್ದು, ಇತ್ತೀಚಿನ ಕೆಲ ದಿನಗಳಿಂದ <1000/ನಿತ್ಯ ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ.
ಇದೇ ವೇಳೆ ಕೋವಿಡ್-19 ವಿರುದ್ಧ ಹೋರಾಡಲು ಬೇಕಾದ IgG ರೋಗನಿರೋಧಕ ಶಕ್ತಿಯನ್ನು ನಗರದ ಜನಸಂಖ್ಯೆಯ 32.3% ಜನರು ಬೆಳೆಸಿಕೊಂಡಿದ್ದಾರೆ ಎಂದು ಸೆರೋ ಸರ್ವೇಯಿಂದ ತಿಳಿದು ಬಂದಿದೆ. ಈ ಸಂಬಂಧ ನಡೆಸಿದ ಸರ್ವೇಯಲ್ಲಿ ಚೆನ್ನೈ ಮಹಾನಗರ ಪಾಲಿಕೆಯು 6,389 ಸ್ಯಾಂಪಲ್‌ಗಳನ್ನು ಪರೀಕ್ಷಿಸಿದ್ದು, ಇದಲ್ಲಿ 2,062 ಮಂದಿಗೆ IgG ರೋಗ ನಿರೋಧಕ ಶಕ್ತಿ ಇರುವುದು ಕಂಡು ಬಂದಿದೆ.
ನಗರದ ದಟ್ಟ ಜನಸಂಖ್ಯೆಯ ಪ್ರದೇಶಗಳ ಜನರ ರಕ್ತದ ಸ್ಯಾಂಪಲ್‌ಗಳನ್ನು ರ‍್ಯಾಂಡಮ್ ಆಗಿ ಸಂಗ್ರಹಿಸಿ ಅವುಗಳಲ್ಲಿ IgG ರೋಗ ನಿರೋಧಕ ಶಕ್ತಿ ಇದೆಯೇ ಎಂದು ಪರೀಕ್ಷೆ ಮಾಡಲಾಗಿದೆ. ಈ ಸರ್ವೇಯನ್ನು ICMR ಹಾಗೂ ಗ್ರೇಟರ್ ಚೆನ್ನೈ ಮಹಾನಗರ ಪಾಲಿಕೆಗಳ ಸಹಯೋಗದೊಂದಿಗೆ ಮಾಡಲಾಗಿದೆ.
ತಮಿಳುನಾಡಿನಲ್ಲಿ ಒಟ್ಟಾರೆ 6,96,116 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಇದ್ದು, 6,50,856 ಮಂದಿ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಒಟ್ಟಾರೆ ಚೇತರಿಕೆಯ ಪ್ರಮಾಣವು 93%ನಷ್ಟಿದೆ.