alex Certify ಲಕ್ಷದ್ವೀಪದಲ್ಲಿ ಕೋವಿಡ್​​ ರೋಗಿಯ ಸಹಾಯಕ್ಕೆ ನಿಂತ ಭಾರತೀಯ ನೌಕಾಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷದ್ವೀಪದಲ್ಲಿ ಕೋವಿಡ್​​ ರೋಗಿಯ ಸಹಾಯಕ್ಕೆ ನಿಂತ ಭಾರತೀಯ ನೌಕಾಪಡೆ

ಲಕ್ಷದ್ವೀಪದಲ್ಲಿರುವ ಕಲ್ಪೇನಿ ಎಂಬಲ್ಲಿ 75 ವರ್ಷದ ಕೋವಿಡ್ ರೋಗಿಯನ್ನ ಕೊಚ್ಚಿಗೆ ಸ್ಥಳಾಂತರಗೊಳಿಸುವ ಸಲುವಾಗಿ ಭಾರತೀಯ ನೌಕಾಪಡೆಯು ತನ್ನ ಸೇವೆಯನ್ನ ವಿಸ್ತರಿಸಿದೆ.

ದಕ್ಷಿಣ ನೇವಲ್​ ಕಮಾಂಡ್​ ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಕುತ್ತಿಗೆ ಮುರಿತದಿಂದ ಬಳಲುತ್ತಿರುವ ಕೋವಿಡ್​ ರೋಗಿಯನ್ನ ಪವನ್​​ ಹ್ಯಾನ್ಸ್​ ಹೆಲಿಕಾಪ್ಟರ್​ ಮೂಲಕ ಬುಧವಾರ ಕರೆದೊಯ್ಯಲಾಯಿತು. ಈ ವ್ಯಕ್ತಿಯನ್ನ ಬುಧವಾರ ಐಎನ್​​ಹೆಚ್​ಸಿ ಸಂಜೀವನಿ ನೌಕಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಯುಟಿಎಲ್​ ಆಡಳಿತ ಕೋರಿಕೆಯ ಮೇರೆಗೆ ನೇವಲ್​ ಕಮಾಂಡ್​ ಒಪ್ಪಿಗೆ ನೀಡಿದ ಬಳಿಕ ರೋಗಿಗೆ ವೈದ್ಯಕೀಯ ಆರೈಕೆಯನ್ನ ನೀಡಲಾಗ್ತಿದೆ. ನೌಕಾ ಆಸ್ಪತ್ರೆಯಲ್ಲಿ ಲಕ್ಷದ್ವೀಪದ ನಿವಾಸಿಗಳಿಗೆ 10 ಬೆಡ್​ಗಳನ್ನ ಕಾಯ್ದಿರಿಸಲಾಗಿದೆ.

ಈ ನಡುವೆ ಭಾರತೀಯ ನೌಕಾಪಡೆ ಎಂಪಿವಿ ಮೇಘನಾ ಹಡಗಿನ ಮೂಲಕ ಬುಧವಾರ ಮಧ್ಯಾಹ್ನ ಆಂಡ್ರೋತ್​​​ ದ್ವೀಪಲ್ಲೆ 13 ಆಮ್ಲಜನಕ ಸಿಲಿಂಡರ್​ಗಳನ್ನ ಕಳುಹಿಸಿಕೊಟ್ಟಿದೆ ಎನ್ನಲಾಗಿದೆ. ಈ ಹಡಗು ಇದೀಗ ಕವರಟ್ಟಿ ದ್ವೀಪದಲ್ಲಿ 25 ಸಿಲಿಂಡರ್​ಗಳನ್ನ ಪೂರೈಸಿ ಹಾಗೂ ಅಮಿನಿ ದ್ವೀಪದಲ್ಲಿದ್ದ ಆರು ಸಿಲಿಂಡರ್​ಗಳನ್ನ ಸಾಗಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...