alex Certify ಮೃಗಾಲಯದಲ್ಲಿ ಪುಟ್ಟ ಆನೆಯ ತುಂಟಾಟ: ಮನಸ್ಸಿಗೆ ಮುದ ನೀಡುತ್ತೆ ಗಜರಾಜನ ಈ ಮುದ್ದು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃಗಾಲಯದಲ್ಲಿ ಪುಟ್ಟ ಆನೆಯ ತುಂಟಾಟ: ಮನಸ್ಸಿಗೆ ಮುದ ನೀಡುತ್ತೆ ಗಜರಾಜನ ಈ ಮುದ್ದು ವಿಡಿಯೋ

ಪ್ರಾಣಿಗಳು ಹಾಗೂ ಮನುಷ್ಯನ ನಡುವಿನ ಸಂಬಂಧ ಅವಿನಾಭಾವವಾದದ್ದು. ಎಂತಹ ಕ್ರೂರ ಪ್ರಾಣಿಯನ್ನಾದರೂ ಪಳಗಿಸುವ ಶಕ್ತಿ ಮನುಷ್ಯನಿಗಿದೆ. ಇದೇ ಕಾರಣಕ್ಕೆ ವನ್ಯ ಜೀವಿಗಳು ಸಹ ಮನುಷ್ಯನೊಂದಿಗೆ ಬೆರೆತ ಸಾಕಷ್ಟು ಉದಾಹರಣೆಗಳನ್ನ ನಾವು ತಿಳಿದಿದ್ದೇವೆ.

ಇದೇ ಮಾತಿಗೆ ಪೂರಕ ಎಂಬಂತೆ ಪುಟ್ಟ ಆನೆ ಮರಿಯೊಂದು ತನ್ನ ಸಮೀಪವೇ ಇದ್ದ ವ್ಯಕ್ತಿ ಬಳಿ ಆಟವಾಡಿಸು ಅಂತಾ ಪುಸಲಾಯಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. @Gannuuprem ಎಂಬ ಖಾತೆಯಿಂದ ಈ ವಿಡಿಯೋವನ್ನ ಶೇರ್​ ಮಾಡಲಾಗಿದೆ. ಗಣ್ಣುಗೆ ಮನುಷ್ಯರ ಜೊತೆ ಆಟವಾಡಬೇಕು ಎನಿಸುತ್ತಿದೆ. ಆದರೆ ಆತ ಕೆಲಸ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾನೆ. ಇಬ್ಬರಲ್ಲಿ ಯಾರು ಗೆಲ್ತಾರೆ..? ಎಂದು ಶೀರ್ಷಿಕೆ ನೀಡಲಾಗಿದೆ.

ಈ ವಿಡಿಯೋದಲ್ಲಿ ಆನೆ ಮರಿಯು ಸನಿಹದಲ್ಲೇ ಬೇರೆ ಕೆಲಸದಲ್ಲಿ ನಿರತನಾಗಿದ್ದ ಮಾವುತನ ಬಳಿ ಆಟವಾಡಲು ಪ್ರಯತ್ನಿಸುತ್ತೆ. ಬಳಿಕ ಓಡಿ ಹೋಗಿ ತನ್ನ ತಾಯಿಯ ಹಿಂದೆ ಅವಿತುಕೊಳ್ಳುತ್ತೆ. ಮತ್ತೆ ಪುನಃ ಆ ವ್ಯಕ್ತಿಯ ಬಳಿ ಹೋಗಿ ಆತನ ಕೆಲಸಕ್ಕೆ ಅಡ್ಡಿ ಮಾಡುತ್ತೆ. ಆನೆ ಮರಿಯ ಚೇಷ್ಟೆಗೆ ಮನಸೋತ ವ್ಯಕ್ತಿ ಆನೆಯೊಂದಿಗೆ ಆಟವಾಡುತ್ತಾನೆ. ಈ ವಿಡಿಯೋ ಟ್ವಿಟರ್​ನಲ್ಲಿ ಲಕ್ಷಕ್ಕೂ ಹೆಚ್ಚು ಲೈಕ್ಸ್ ಸಂಪಾದಿಸಿದೆ.

https://twitter.com/i/status/1380014820548698113

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...