
ಚಿರತೆಯೊಂದು ಮರದ ಮೇಲೆ ಹತ್ತಿ ಕೊಂಬೆಯ ತುದಿಯಲ್ಲಿ ಕುಳಿತಿದ್ದ ಕೋತಿಯನ್ನು ಕೆಳಗೆ ಬೀಳಿಸಲು ಕೊಂಬೆಯನ್ನು ಅಲುಗಿಸಿದ ವಿಚಿತ್ರ ಪ್ರಸಂಗದ ವಿಡಿಯೋ ವೈರಲ್ ಆಗಿದೆ.
ಸರಸರನೆ ಮರ ಏರುವ ಚಿರತೆ ಮಂಗವನ್ನು ಕೆಳಗೆ ಬೀಳಿಸಿ ಬೇಟೆಯಾಡುವುದು ಅದರ ಉದ್ದೇಶ. ಆದರೆ ಸಣ್ಣ ಕೊಂಬೆಯ ತುದಿಯಲ್ಲಿದ್ದ ಮಂಗವನ್ನು ಸಮೀಪಿಸುವುದು ಕಷ್ಟವಾಗುತ್ತದೆ. ಹೀಗಾಗಿ ಕೊಂಬೆಯನ್ನು ಅಲುಗಿಸಿ ಬೀಳಿಸಲು ಪ್ರಯತ್ನಿಸುತ್ತದೆ. ಮಂಗ ಮಾತ್ರ ಕೊಂಬೆಯ ತುದಿಯಲ್ಲೇ ಬಿಗಿಯಾಗಿ ಹಿಡಿದು ಜೀವ ರಕ್ಷಿಸಿಕೊಳ್ಖುತ್ತದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಾಂತ ನಂದ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ವಿಡಿಯೋ ಬಗ್ಗೆ ತಮ್ಮ ಅಭಿಪ್ರಾಯ ನೀಡಿದ್ದಾರೆ.