alex Certify ಕಲಾಪಕ್ಕೆ ಅಡ್ಡಿಪಡಿಸಿದ 8 ಸಂಸದರ ಅಮಾನತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಾಪಕ್ಕೆ ಅಡ್ಡಿಪಡಿಸಿದ 8 ಸಂಸದರ ಅಮಾನತು

ನವದೆಹಲಿ: ಕೃಷಿ ಮಸೂದೆ ಮಂಡನೆಗೆ ಅಡ್ಡಿಪಡಿಸಿ ದುರ್ವರ್ತನೆ ತೋರಿ ಅಶಿಸ್ತು ಮೆರೆದ ಹಿನ್ನೆಲೆಯಲ್ಲಿ 8 ಸಂಸದರನ್ನು ಅಮಾನತು ಮಾಡಿ ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಆದೇಶ ಹೊರಡಿಸಿದ್ದಾರೆ.

ನಿನ್ನೆ ರಾಜ್ಯಸಭೆ ಕಲಾಪದ ವೇಳೆ 2 ಕೃಷಿ ಮಸೂದೆಯನ್ನು ಮಂಡಿಸಲಾಗಿತ್ತು. ಮಸೂದೆ ಅಂಗೀಕಾರಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ವೇಳೆ ಟಿಎಂಸಿ ಸದಸ್ಯ ಡೆರೆಕ್ ಒ ಬ್ರಿಯಾನ್, ಉಪಸಭಾಪತಿ ಬಳಿ ತೆರಳಿ ರೂಲ್ ಬುಕ್ ಕಿತ್ತುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು.

ಸೈಯದ್ ನಾಸೀರ್ ಹುಸೇನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ ರಾಗೇಶ್, ರಿಪುನ್ ಬೋರಾ, ಡೋಲಾ ಸೇನ್ ಮತ್ತು ಎಲಮರನ್ ಕರೀಮ್ ಅವರು ಕೂಡ ಮಸೂದೆ ಮಂಡನೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದುರ್ವರ್ತನೆ ತೋರಿದ 8 ಸಂಸದರನ್ನು ಒಂದು ವಾರ ಕಾಲ ಅಮಾನತು ಮಾಡಲಾಗಿದೆ.

ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಸಭಾಪತಿ ವೆಂಕಯ್ಯ ನಾಯ್ಡು, ನಿನ್ನೆ ರಾಜ್ಯಸಭೆಯಲ್ಲಿ ಸದನದ ಬಾವಿಗಿಳಿದು ಕೆಲ ಸದಸ್ಯರು ದುರ್ವರ್ತನೆ ತೋರಿದ್ದಾರೆ. ಉಪಸಭಾಪತಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ 8 ಸಂಸದರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಅಶಿಸ್ತು ಹಾಗೂ ದುರ್ವರ್ತನೆ ತೋರಿದ್ದಕ್ಕಾಗಿ 8 ಸದಸ್ಯರನ್ನು ಒಂದು ವಾರ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...