ಹಿಮದಿಂದ ಸಂಪೂರ್ಣವಾಗಿ ಆವೃತವಾದ ಹಿಮಾಲಯ ಪರ್ವತಗಳ ಅದ್ಭುತ ಫೋಟೋಗಳನ್ನ ನಾಸಾ ಬಾಹ್ಯಾಕಾಶದಿಂದ ಸೆರೆಹಿಡಿದಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಾಸಾ ಸಿಬ್ಬಂದಿ ಸೆರೆ ಹಿಡಿದ ಫೋಟೋದಲ್ಲಿ ದೆಹಲಿ ಹಾಗೂ ಲಾಹೋರ್ ನಗರದ ದೀಪಗಳೂ ಸೆರೆಯಾಗಿವೆ.
ವಿಶ್ವದ ಅತಿ ಎತ್ತರದ ಪರ್ವತ ಶ್ರೇಣಿಯು 50 ದಶಲಕ್ಷ ವರ್ಷಗಳ ನಡುವಿನ ಘರ್ಷಣೆಯ ಪರಿಣಾಮದಿಂದ ಉಂಟಾಗಿದೆ. ಈ ಹಿಮಾಲಯ ಪರ್ವತವು ಭಾರತ ಹಾಗೂ ಪಾಕಿಸ್ತಾನದ ಫಲವತ್ತಾದ ಕೃಷಿ ಭೂಮಿ ಭಾಗದಲ್ಲಿ ರಚಿತವಾಗಿದೆ ಎಂದು ನಾಸಾ ತನ್ನ ಅಧಿಕೃತ ಖಾತೆಯಲ್ಲಿ ಮಾಹಿತಿ ಬರೆದುಕೊಳ್ಳುವ ಮೂಲಕ ಫೋಟೋ ಶೇರ್ ಮಾಡಿದೆ.
ನಾಸಾ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಹಿಮಾಲಯದ ಸೌಂದರ್ಯವನ್ನ ನೋಡಿದ ನೆಟ್ಟಿಗರು ಲೈಕ್ಗಳ ಸುರಿಮಳೆಯನ್ನೇ ಹರಿಸಿದ್ದಾರೆ.