
ಸಂಶೋಧನಾರ್ಥವಾಗಿ ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿಗಳಿಗೆ ಆಹಾರ ಕೊಡುವುದೇ ದೊಡ್ಡ ತಲೆನೋವಿನ ಸಂಗತಿ. ಹೀಗಾಗಿ ಆಹಾರ ತಂತ್ರಜ್ಞಾನಿಗಳ ಮೊರೆ ಹೋಗಲು ನಾಸಾ ನಿರ್ಧರಿಸಿದೆ.
ಗಗನಯಾನಿಗಳಿಗೆ ಬಾಹ್ಯಾಕಾಶದಲ್ಲಿ ಹಸಿವು ನೀಗಿಸಲು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಆಹಾರ ಸಿದ್ಧಪಡಿಸಬೇಕು. ಈ ಆವಿಷ್ಕಾರ ಮಾಡಿದವರಿಗೆ 3.6 ಕೋಟಿ ರೂ. (5 ಲಕ್ಷ ಡಾಲರ್) ಬಹುಮಾನ ಘೋಷಿಸಿದೆ.
ಕೆನಡಿಯನ್ ಸ್ಪೇಸ್ ಏಜೆನ್ಸಿ ಸಹಭಾಗಿತ್ವದಲ್ಲಿ ಡೀಪ್ ಸ್ಪೇಸ್ ಫುಡ್ ಚಾಲೆಂಜ್ ಆಯೋಜಿಸಿರುವ ನಾಸಾ, ತನ್ನ ಟ್ವಿಟ್ಟರ್ ನಲ್ಲಿ ಈ ಪ್ರಕಟಣೆ ನೀಡಿದೆ. ವೆಬ್ ಸೈಟ್ ನಲ್ಲೂ (deepspacefoodchallenge.org) ಪ್ರಕಟಿಸಿದೆ.
ಶ್ರೀಮಂತ ರೈತ..! ಹೆಲಿಕಾಪ್ಟರ್ ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ ಹಾಲು ಉತ್ಪಾದಕ..!!
ಯಾರೇ ಆಗಿರಲಿ, ಜಾಗ ಯಾವುದೇ ಇರಲಿ. ಪ್ರತಿಯೊಬ್ಬರಿಗೂ ಆಹಾರ ಅತ್ಯವಶ್ಯಕ ಎಂಬುದನ್ನು ಎಲ್ಲರೂ ಒಪ್ಪುತ್ತೇವೆ. ಅನ್ಯಗ್ರಹ ವಾಸ ಅಥವಾ ಬಾಹ್ಯಾಕಾಶ ಸಂಶೋಧನೆ ಸಂದರ್ಭದಲ್ಲಿ ಗಗನಯಾತ್ರಿಗಳಿಗೆ ಅಗತ್ಯ ಆಹಾರ ಸಿದ್ಧಪಡಿಸಲು ಆಹ್ವಾನಿಸಿದೆ.
ಆಸಕ್ತರು ಮೇ 28 ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಜುಲೈ 30 ರೊಳಗೆ ಮೊದಲ ಹಂತದ ಅಂದಾಜು ಪರಿಕಲ್ಪನೆಯನ್ನು ಸಲ್ಲಿಸಬೇಕು. 2024 ರಲ್ಲಿ ವಿಜೇತರ ಹೆಸರು ಪ್ರಕಟಿಸಲಾಗುತ್ತದೆ.
ಬಹುಮುಖ್ಯವಾಗಿ ಬಾಹ್ಯಾಕಾಶದ ವಾತಾವರಣಕ್ಕೆ ಹೊಂದಿಕೊಳ್ಳುವುದರ ಜೊತೆಗೆ ಭೂಮಿಯ ವಾತಾವರಣಕ್ಕೂ ಹೊಂದಾಣಿಕೆ ಆಗಬೇಕು. ಆಂತಹ ಆಹಾರ ತಂತ್ರಜ್ಞಾನ ಬಳಸಬೇಕು ಎಂಬಿತ್ಯಾದಿ ಷರತ್ತು ವಿಧಿಸಿದೆ.