ನವದೆಹಲಿ: ಮಹತ್ವಾಕಾಂಕ್ಷಿಯ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಗ್ರಾಮೀಣ ಜನತೆಗೆ ಆಸರೆಯಾಗಿರುವ ಕೊರೋನಾ ಸಂಕಷ್ಟ ಸಂದರ್ಭದಲ್ಲಿ ಕೈ ಹಿಡಿದಿರುವ ನರೇಗಾ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಲು ಚಿಂತನೆ ನಡೆದಿದೆ. ನಗರದಲ್ಲಿನ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದು ಅವರ ನೆರವಿಗೆ ನರೇಗಾ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ.
ನಗರದಲ್ಲಿ ಶ್ರಮವಹಿಸಿ ಮಾಡುವ ಕೆಲಸಗಳು, ರಸ್ತೆ ನಿರ್ಮಾಣ, ಉದ್ಯಾನ, ಕೆರೆ ಸ್ವಚ್ಛತೆ ಕೆಲಸಗಳನ್ನು ಕಾರ್ಮಿಕರು ಮಾಡಬಹುದಾಗಿದೆ. ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ಸರ್ಕಾರವೇ ನೀಡಲಿದೆ. ಕೆಲಸವಿಲ್ಲದೆ ಊರಿಗೆ ಬಂದವರಿಗೆ ಇದು ಆಸರೆಯಾಗಿದ್ದು ನಗರಪ್ರದೇಶಕ್ಕೆ ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.