ನಿಮ್ಮ ಫೋನ್‌ಗೆ ಯಾವ ಪಾಸ್‌ವರ್ಡ್ ಅಥವಾ ಅನ್ ಲಾಕಿಂಗ್ ಪ್ಯಾಟರ್ನ್ ಇಡಬೇಕು ಎಂದು ಆಗಾಗ ನಿಮಗೆ ಬಹಳಷ್ಟು ಗೊಂದಲಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಪಾಸ್‌ವರ್ಡ್ ಬಲವಾಗಿರುವುದನ್ನು ಇಡಬೇಕೋ ಅಥವಾ ದುರ್ಬಲವಾದದ್ದನ್ನು ಇಡಬೇಕೋ ಎಂದು ನಿರ್ಧರಿಸುವುದು ಒಮ್ಮೊಮ್ಮೆ ಕಷ್ಟವಾಗಿಬಿಡುತ್ತದೆ.
ಆದರೆ ಡಿಜಿಟಲ್ ಕಳ್ಳತನ ಹಾಗೂ ಹ್ಯಾಕಿಂಗ್‌ನ ಈ ಯುಗದಲ್ಲಿ ಫೋನ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಪ್ರಬಲವಾದ ಪಾಸ್‌ವರ್ಡ್ ಇಡುವುದು ಬಹಳ ಮುಖ್ಯವಾಗಿಬಿಟ್ಟಿದೆ. ಈ ವಿಚಾರದ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾಗಿರುವ ನಾಗ್ಪುರ ಪೊಲೀಸ್, ತನ್ನ ಟ್ವಿಟರ್ ಖಾತೆಯೊಂದರಲ್ಲಿ ಫನ್ನಿ ಪೋಸ್ಟ್ ಒಂದನ್ನು ಮಾಡಿದೆ.
ತಮ್ಮ ಮೊಬೈಲ್‌ಗಳಿಗೆ ಬಲಿಷ್ಠವಾದ ಪಾಸ್‌ವರ್ಡ್‌ಗಳನ್ನು ಇಡಲು ಪ್ರೇರಣೆ ನೀಡಲು ಮುಂದಾಗಿರುವ ನಾಗ್ಪುರ ಪೊಲೀಸ್, ಇಲ್ಲೊಬ್ಬ ವ್ಯಕ್ತಿ ತನ್ನ ಫೋನ್‌ಗೆ ಪಾಸ್‌ವರ್ಡ್ ಸೆಟ್ ಮಾಡಿರುವುದನ್ನು ತೋರಿಸಿದ್ದು, ಅದನ್ನು ಕಂಡ ನೆಟ್ಟಿಗರು ದಿಗ್ಭ್ರಮೆಗೊಳಗಾಗಿದ್ದಾರೆ.