
ಮಹಾರಾಷ್ಟ್ರದ ನಾಗ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. 28 ವರ್ಷದ ಯುವಕ ಲೈಂಗಿಕ ಕ್ರಿಯೆ ನಡೆಸುವ ವೇಳೆ ಸಾವನ್ನಪ್ಪಿದ್ದಾನೆ. ಯುವಕನ ಗುತ್ತಿಗೆಯನ್ನು ಹಗ್ಗದಿಂದ ಕಟ್ಟಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಲಾಡ್ಜ್ ಒಂದರಲ್ಲಿ ನಡೆದಿದೆ.
ಪೊಲೀಸ್ ಪ್ರಕಾರ ಮಹಿಳೆ ಜೊತೆ ಸಮಯ ಕಳೆಯಲು ಮೃತ ವ್ಯಕ್ತಿ ಲಾಡ್ಜ್ ಒಂದರಲ್ಲಿ ರೂಮ್ ಬುಕ್ ಮಾಡಿದ್ದ. ಮೊದಲು ಇಬ್ಬರೂ ಪೋರ್ನ್ ಚಿತ್ರ ವೀಕ್ಷಿಸಿದ್ದಾರೆ. ನಂತ್ರ ಕುರ್ಚಿಗೆ ಯುವಕನ ಕೈ ಹಾಗೂ ಕಾಲನ್ನು ಮಹಿಳೆ ಕಟ್ಟಿದ್ದಾಳೆ. ಇನ್ನೊಂದು ಹಗ್ಗವನ್ನು ಯುವಕನ ಕುತ್ತಿಗೆಗೆ ಕಟ್ಟಿದ್ದಾಳೆ. ಸಂಭೋಗದ ನಂತ್ರ ಮಹಿಳೆ ಬಾತ್ ರೂಮಿಗೆ ಹೋಗಿದ್ದಾಳೆ. ಈ ವೇಳೆ ಯುವಕ ಕುಳಿತಿದ್ದ ಕುರ್ಚಿ ಅಲುಗಾಡಿದೆ. ಈ ವೇಳೆ ಹಗ್ಗ ಬಿಗಿಯಾಗಿದೆ.
ಮಹಿಳೆ ಬಾತ್ ರೂಮಿನಿಂದ ಬಂದಾಗ ಯುವಕ ಪ್ರಜ್ಞೆ ತಪ್ಪಿದ್ದನಂತೆ. ತಕ್ಷಣ ಲಾಡ್ಜ್ ಮಾಲೀಕರಿಗೆ ಮಹಿಳೆ ಮಾಹಿತಿ ನೀಡಿದ್ದಾಳೆ. ಆದ್ರೆ ಸ್ಥಳದಲ್ಲಿಯೇ ಯುವಕ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆ ಹಾಗೂ ಮೃತನ ಮಧ್ಯೆ ಯಾವ ಸಂಬಂಧವಿತ್ತು ಎಂಬುದು ಇನ್ನೂ ಬಹಿರಂಗವಾಗಿಲ್ಲ.