ಲೈಂಗಿಕ ಕ್ರಿಯೆ ವೇಳೆ ಕುತ್ತಿಗೆಗೆ ಹಗ್ಗ ಗಂಟು ಹಾಕಿಕೊಂಡ ಪರಿಣಾಮ 30 ವರ್ಷದ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ನಾಗ್ಪುರದ ಖಪರ್ಖೇಡಾದ ಲಾಡ್ಜ್ವೊಂದರಲ್ಲಿ ನಡೆದಿದೆ.
ಲೈಂಗಿಕ ಕ್ರಿಯೆಯ ಆನಂದವನ್ನ ಇನ್ನಷ್ಟು ಹೆಚ್ಚು ಮಾಡಲಿಕ್ಕೋಸ್ಕರ ಮಹಿಳೆ ಆತನ ಕೈ ಕಾಲುಗಳನ್ನ ಕುರ್ಚಿಗೆ ಕಟ್ಟಿ ಕುತ್ತಿಗೆಗೂ ಹಗ್ಗ ಕಟ್ಟಲು ಹೋದ ವೇಳೆ ಈ ಅವಘಡ ಸಂಭವಿಸಿದೆ.
ಮೃತನಾದ ವ್ಯಕ್ತಿ ಕಳೆದ 5 ವರ್ಷಗಳ ಹಿಂದೆ ಮದುವೆಯಾಗಿದ್ದು ಒಂದು ಮಗುವನ್ನೂ ಹೊಂದಿದ್ದಾನೆ. ಆದರೂ ಸಹ ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಈತ ಗುರುವಾರ ರಾತ್ರಿ ಆಕೆಯೊಂದಿಗೆ ಲಾಡ್ಜ್ಗೆ ತೆರಳಿದ್ದ.
ಲೈಂಗಿಕ ಕ್ರಿಯೆಯನ್ನ ಇನ್ನಷ್ಟು ಪ್ರಚೋದಿಸುವ ಸಲುವಾಗಿ ಮಹಿಳೆ ಆತನ ಕೈ ಕಾಲು ಹಾಗೂ ಕುತ್ತಿಗೆಗೆ ಹಗ್ಗ ಕಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪುರುಷನನ್ನ ಈ ರೀತಿ ಕುರ್ಚಿಗೆ ಕಟ್ಟಿ ಹಾಕಿದ್ದ ಮಹಿಳೆ ಬಳಿಕ ವಾಶ್ ರೂಂಗೆ ಹೋಗಿದ್ದಾಳೆ. ಈ ವೇಳೆ ಕುರ್ಚಿ ಜಾರಿ ಬಿದ್ದ ಪರಿಣಾಮ ಆತನ ಕುತ್ತಿಗೆಗೆ ಹಗ್ಗ ಬಿಗಿಯಾಗಿ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.