ಮಹಾರಾಷ್ಟ್ರದ ನಾಗ್ಪುರದಲ್ಲಿ ಮಂಗಳವಾರ 41 ವರ್ಷದ ವೈದ್ಯೆ, ಪತಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಾಕ್ಟರ್ ಸುಷ್ಮಾ ರಾಣೆ ಆತ್ಮಹತ್ಯೆ ಮಾಡಿಕೊಂಡ ವೈದ್ಯೆ.
ಅವರ ಪತಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ. ಧೀರಜ್ ಗೆ 42 ವರ್ಷ. ಅವರ ಮಕ್ಕಳ ವಯಸ್ಸು 11 ಮತ್ತು ಐದು ವರ್ಷ ಎನ್ನಲಾಗಿದೆ. ಹಾಸಿಗೆ ಮೇಲೆ ಮೂವರ ಶವ ಸಿಕ್ಕಿದೆ. ಸುಷ್ಮಾ ನೇಣಿಗೆ ಶರಣಾಗಿದ್ದಾರೆ.
ಅವ್ರ ಮನೆಯಲ್ಲಿ ವಾಸವಾಗಿದ್ದ 60 ವರ್ಷದ ಚಿಕ್ಕಮ್ಮ ಕೋಣೆ ಬಾಗಿಲು ಬಡಿದಿದ್ದಾರೆ. ಆದ್ರೆ ಬಾಗಿಲು ತೆರೆಯದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತ್ರ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಎರಡು ಸಿರಿಂಜ್ ಹಾಗೂ ಡೆತ್ ನೋಟ್ ಸಿಕ್ಕಿದೆ. ಪತಿ ಹಾಗೂ ಮಕ್ಕಳಿಗೆ ಆಹಾರದಲ್ಲಿ ಪ್ರಜ್ಞೆ ತಪ್ಪುವ ಔಷಧಿ ನೀಡಿ ನಂತ್ರ ಸಿರಿಂಜ್ ಚುಚ್ಚಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.