alex Certify N95 ಮಾಸ್ಕ್‌‌ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

N95 ಮಾಸ್ಕ್‌‌ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

N95 Masks are Most Effective in Blocking Particles, Cloth Covering Releases Fibre into Air: Study

ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಸರ್ಜಿಕಲ್ ಗುಣಮಟ್ಟದ N95 ಮಾಸ್ಕ್‌ಗಳನ್ನು ಧರಿಸುವ ಮಹತ್ವವೇನೆಂದು ಸಾಕಷ್ಟು ಓದಿದ್ದೇವೆ. ಈ ಮಾಸ್ಕ್‌ಗಳು ಬಹುತೇಕ ಸೂಕ್ಷ್ಮ ಕಣಗಳು ನಮ್ಮ ಮೂಗು ಸೇರದಂತೆ ತಡೆಗಟ್ಟುತ್ತವೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.

Scientific Reportsನಲ್ಲಿ ವರದಿಯಾದ ಅಧ್ಯಯನವೊಂದರಲ್ಲಿ, ಸರ್ಜಿಕಲ್/ಮನೆಯಲ್ಲಿ ಮಾಡಿದ ಬಟ್ಟೆ ಮಾಸ್ಕ್‌ಗಳ ನಡುವಿನ ವ್ಯತ್ಯಾಸದ ವಿಶ್ಲೇಷಣೆ ಮಾಡಲಾಗಿದೆ. ಉಸಿರಾಡುವ, ಸೀನುವ ಹಾಗೂ ಕೆಮ್ಮುವ ವೇಳೆ ಬಿಡುಗಡೆ ಆಗುವ ಬಹುತೇಕ ಏರೋಸಾಲ್‌ ಗಾತ್ರದ ಸೂಕ್ಷ್ಮಕಣಗಳನ್ನು ಪಸರದಂತೆ ತಡೆಗಟ್ಟಲು ಈ N95 ಮಾಸ್ಕ್‌ಗಳು ಬಹಳ ಪ್ರಭಾವಿಯಾಗಿವೆ ಎಂದು ತಿಳಿದುಬಂದಿದೆ.

ಇದೇ ವೇಳೆ, ಬಟ್ಟೆಯ ಮಾಸ್ಕ್‌ಗಳು ಸೂಕ್ಷ್ಮ ಕಣಗಳು ಪಸರದಂತೆ ತಡೆಗಟ್ಟುವ ಬದಲು ತಮ್ಮಲ್ಲಿರುವ ಸೂಕ್ಷ್ಮ ಎಳೆಗಳು ಗಾಳಿಯಲ್ಲಿ ಸೇರಿಕೊಳ್ಳುವಂತೆ ಮಾಡುತ್ತವೆ ಎಂದು ತಿಳಿದುಬಂದಿದೆ.

ಕ್ಯಾಲಿಫೋರ್ನಿಯಾ ವಿವಿ ನಡೆಸಿದ ಈ ಅಧ್ಯಯನದ ವರದಿಯನ್ನು ಮೆಡಿಕಲ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...