BIG NEWS: ಮುಂಬೈ ಉದ್ಯಾನದಲ್ಲಿ ಕಾಣಿಸಿಕೊಂಡ ನಿಗೂಢ ಏಕಶಿಲಾಕೃತಿ 11-03-2021 6:35AM IST / No Comments / Posted In: Latest News, India 2020ರಲ್ಲಿ ಜಗತ್ತಿನ ಅನೇಕ ಕಡೆಗಳಲ್ಲಿ ಲೋಹದ ಏಕಶಿಲಾಕೃತಿಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದು, ಇದ್ದಕ್ಕಿದ್ದಂತೆಯೇ ನಾಪತ್ತೆಯೂ ಆದ ಘಟನೆಗಳು ಅನೇಕ ಬಾರಿ ವರದಿಯಾಗಿವೆ. ಡಿಸೆಂಬರ್ 2020ರಲ್ಲಿ ಭಾರತದಲ್ಲೂ ಸಹ ಈ ನಿಗೂಢ ವಸ್ತುಗಳು ಕಾಣಿಸಿಕೊಂಡಿದ್ದವು. ಅಹಮದಾಬಾದ್‌ನ ತಾಲ್ಟೇಜ್‌ನ ಸಿಂಫೋನಿ ವನೋದ್ಯಾನದಲ್ಲಿ ಕಾಣಿಸಿಕೊಂಡಿದ್ದ ಈ ಏಕಶಿಲಾಕೃತಿಯು ತ್ರಿಭುಜಾಕೃತಿಯಲ್ಲಿದ್ದು, ಹೊಳೆಯುವ ಲೋಹದ ಶೀಟ್‌ಗಳನ್ನು ಹೊಂದಿತ್ತು. ಅದರ ಮೇಲೆ ಅನೇಕ ಸಂಖ್ಯೆಗಳನ್ನು ಕೆತ್ತಲಾಗಿತ್ತು. ಕಾಣಿಸಿಕೊಂಡ ಎರಡೇ ವಾರಗಳಲ್ಲಿ ಈ ಶಿಲಾಕೃತಿ ನಾಪತ್ತೆಯಾಗಿತ್ತು. ಇದೀಗ ಮುಂಬಯಿಯ ಬಾಂದ್ರಾದ ಜಾಗರ್ಸ್ ಉದ್ಯಾನದಲ್ಲಿ ಇಂಥದ್ದೇ ಮತ್ತೊಂದು ಆಕೃತಿ ಕಾಣಿಸಿಕೊಂಡಿದೆ. ಬುಧವಾರದಂದು ಉದ್ಯಾನದ ನಡುವಿನಲ್ಲೇ ಈ ಕಲಾಕೃತಿ ಕಾಣಿಸಿಕೊಂಡಿದ್ದು, ಬಾಂದ್ರಾ ಕಾರ್ಪೋರೇಟರ್ ಆಸಿಫ್ ಝಕಾರಿಯಾ ಈ ಏಕಶಿಲಾಕೃತಿಯ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಶಿಲಾಕೃತಿಯಲ್ಲೂ ಸಹ ಸಂಖ್ಯೆಗಳನ್ನು ಕೆತ್ತಲಾಗಿರುವುದನ್ನು ನೋಡಬಹುದಾಗಿದೆ. It's here! Mysterious #monolith appeared in #Mumbai! Check it out at Joggers Park Bandra! It has numbers on side of it let’s try & figure out what they mean Don’t know how long it will be there but cant wait to get a picture with it! @mybmcWardHW @mybmc @AUThackeray @INCMumbai pic.twitter.com/x7FU6q5j1i — Asif Zakaria (@Asif_Zakaria) March 10, 2021