alex Certify ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗಲೇ ನಡೆಯಿತು ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗಲೇ ನಡೆಯಿತು ಘೋರ ಕೃತ್ಯ

ಉತ್ತರ ಪ್ರದೇಶದ ಮುಝಾಫರ್​ನಗರದಲ್ಲಿ ವ್ಯಕ್ತಿಯೊಬ್ಬ ತನ್ನ ಸಾವಿನ ವಿಡಿಯೋವನ್ನ ತಾನೇ ರೆಕಾರ್ಡ್​ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ, ಇಬ್ಬರು ಮದ್ಯಪಾನ ಮಾಡ್ತಾ ಮಾತನಾಡ್ತಾ ಇದ್ದರೆ ಮೂರನೇ ವ್ಯಕ್ತಿ ಇದನ್ನ ಚಿತ್ರೀಕರಿಸುತ್ತಿದ್ದ.

ಇದರಲ್ಲಿ ಓರ್ವ ವ್ಯಕ್ತಿ ಕಂಟ್ರಿ ಪಿಸ್ತೂಲ್​ನ್ನ ಹೊರ ತೆಗೆದಿದ್ದಾನೆ ಹಾಗೂ ಅದನ್ನ ಇನ್ನೊಬ್ಬ ವ್ಯಕ್ತಿಗೆ ನೀಡಿದ್ದಾನೆ. ಆ ವ್ಯಕ್ತಿ ಪಿಸ್ತೂಲ್​ ಒಳಗೆ ಗುಂಡನ್ನು ಲೋಡ್​ ಮಾಡಿದ್ದಾನೆ.

ಬಳಿಕ ಆ ವ್ಯಕ್ತಿ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದವನ ಕಡೆ ಗನ್​ ಪಾಯಿಂಟ್​ ಹಿಡಿದು ಫೈರಿಂಗ್​ ನಡೆಸಿದ್ದಾನೆ. ಆ ವ್ಯಕ್ತಿ ಮೊಬೈಲ್​ ಕೈಬಿಡುತ್ತಿದ್ದಂತೆ ವಿಡಿಯೋ ರೆಕಾರ್ಡ್ ಆಗೋದು ಬಂದ್​ ಆಗಿದೆ. ಮೃತ ವ್ಯಕ್ತಿಯನ್ನ 19 ವರ್ಷದ ಪ್ರಿನ್ಸ್ ಎಂದು ಗುರುತಿಸಲಾಗಿದೆ.

ಲಾಡ್ಜ್ ನಲ್ಲೇ ನಡೆದಿದೆ ನಡೆಯಬಾರದ ಘಟನೆ: ಸೊಸೆ ಮೇಲೆರಗಿದ ಮಾವ

ಕೊಲೆ ಮಾಡಿದ ಆರೋಪಿಗೆ ಪ್ರಿನ್ಸ್ ಸೋದರ ಮಾವ ಆಗಿದ್ದ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ.

ಇಬ್ಬರಲ್ಲಿ ಓರ್ವ ವ್ಯಕ್ತಿಯನ್ನ ಮುಝಾಫರ್​ ನಗರ ಪೊಲೀಸರು ಬಂಧಿಸಿದ್ದಾರೆ. ಆದರೆ ಆತನೇ ಕೊಲೆ ಮಾಡಿದ ವ್ಯಕ್ತಿಯಾ ಅನ್ನೋದನ್ನ ಪೊಲೀಸರು ಇನ್ನೂ ಖಚಿತಪಡಿಸಿಲ್ಲ.

https://twitter.com/i/status/1365535275649093636

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...