ನವದೆಹಲಿ: ರೈತರು ಯೂರಿಯಾ ಗೊಬ್ಬರವನ್ನು ಖರೀದಿಸುವ ಸಂದರ್ಭದಲ್ಲಿ ಜೈವಿಕ ಗೊಬ್ಬರವನ್ನೂ ಕಡ್ಡಾಯವಾಗಿ ಖರೀದಿಸಬೇಕಿದೆ. ಕೇಂದ್ರ ಸರ್ಕಾರ ಜೈವಿಕ ಗೊಬ್ಬರ ಖರೀದಿಯನ್ನು ಕಡ್ಡಾಯ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರಾಸಾಯನಿಕ ರಸಗೊಬ್ಬರ ಬಳಕೆ ಅತಿಯಾಗಿದ್ದು ಇದನ್ನು ನಿಯಂತ್ರಿಸಿ ಭೂಮಿಯ ಫಲವತ್ತತೆಯನ್ನು ರಕ್ಷಿಸುವ ಉದ್ದೇಶದಿಂದ ಜೈವಿಕ ಗೊಬ್ಬರ ಬಳಕೆಗೆ ಉತ್ತೇಜನ ನೀಡಲಾಗುವುದು. ಗೊಬ್ಬರದ ಸಮತೋಲಿತ ಬಳಕೆ ಬಗ್ಗೆ ರಚಿಸಲಾಗಿದ್ದ ಕಾರ್ಯಪಡೆ ಈ ಕುರಿತು ಶಿಫಾರಸು ಮಾಡಿದ್ದು ಕೃಷಿ ಸಚಿವಾಲಯ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಭೂಮಿಯ ಫಲವತ್ತತೆ ರಕ್ಷಣೆಯ ಉದ್ದೇಶದಿಂದ ಯೂರಿಯಾ ಜೊತೆಗೆ ಜೈವಿಕ ಗೊಬ್ಬರ ಖರೀದಿ ಕಡ್ಡಾಯ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.