ಹಿಂದೂ ಕುಟುಂಬದ ಮಾರ್ಗದರ್ಶನದೊಂದಿಗೆ ಕೋಲ್ಕತಾದ ಮುಸ್ಲಿಂ ನಿವಾಸಿಗಳು ಒಂಭತ್ತು ವರ್ಷಗಳ ನಂತರ ದುರ್ಗಾ ಪೂಜೆಯನ್ನು ಸಡಗರದಿಂದ ಆಚರಿಸುತ್ತಿದ್ದಾರೆ.
ಅಲಿಮುದ್ದೀನ್ ಪ್ರದೇಶದ ಬಂಗಾಳಿ ಹಿಂದೂ ನಿವಾಸಿಗಳು ಅಲ್ಲಿಂದ ವಲಸೆ ಹೋದ ನಂತರ ಒಂಬತ್ತು ವರ್ಷಗಳ ಕಾಲ ಪೂಜೆಯನ್ನು ನಿಲ್ಲಿಸಲಾಯಿತು. ಹಿಂದೆ ಉಳಿದುಕೊಂಡಿದ್ದ ಮೂರು ಕುಟುಂಬಗಳು ಅಲಿಮುದ್ದೀನ್ ಸಮೀಪದ ಪ್ರದೇಶದಲ್ಲಿ ಪೂಜಾ ಸಂಪ್ರದಾಯವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.
ನಿಮ್ಮ ಹೊಕ್ಕಳಿನಲ್ಲಿದೆ ಮುಖದ ಸೌಂದರ್ಯದ ಗುಟ್ಟು
ಇದೀಗ ಎಜೆಸಿ ಬೋಸ್ ರಸ್ತೆಯ ಪ್ರಾಟ್ ಮೆಮೋರಿಯಲ್ ಶಾಲೆಯ ಬಳಿ ಹಿಂದೂ ಕುಟುಂಬವೊಂದು ನೆಲೆಸಿದೆ. ಜಯಂತ ಮತ್ತು ಶರ್ಮಿಳಾ ಸೇನ್ ಅವರನ್ನು ಸ್ಥಳೀಯ ಮುಸ್ಲಿಂ ನಿವಾಸಿಗಳು ಪೂಜೆಯನ್ನು ಹೇಗೆ ನಡೆಸಬೇಕು ಎಂದು ವಿಚಾರಿಸಲು ಸಂಪರ್ಕಿಸಿದ್ದಾರೆ. ಇದನ್ನು ಕೇಳಿದ ದಂಪತಿಗಳಿಬ್ಬರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಯ ಉತ್ಸವವನ್ನು ಆಯೋಜಿಸುವುದು ಸಣ್ಣ ವಿಷಯವಲ್ಲ. ಇದು ದೀರ್ಘಾವಧಿಯ ಯೋಜನೆಯಾಗಿದ್ದು, ನಿಧಿ ಸಂಗ್ರಹಣೆ ಮಾಡಬೇಕಾಗುತ್ತದೆ. ಇದಕ್ಕೆಂದೇ ಒಂದು ಗ್ರೂಪ್ ಅನ್ನು ರಚಿಸಿ, ನಿಧಿಯ ವ್ಯವಸ್ಥೆ ಮಾಡಲಾಯಿತು.
BIG NEWS: ಡಿಜಿಟಲ್ ವಹಿವಾಟು ಉತ್ತೇಜಿಸಲು RBI ಮಹತ್ವದ ಕ್ರಮ; ಐಎಂಪಿಎಸ್ ಮಿತಿ 5 ಲಕ್ಷಕ್ಕೆ ಹೆಚ್ಚಳ
ನಂತರ ಜಯಂತ ಸೇನ್, ಮೊಹಮ್ಮದ್ ತೌಸೀಫ್ ರೆಹಮಾನ್ ಮತ್ತು ಇತರರು ಕುಮಾರತಲಿಯಿಂದ ದುರ್ಗಾ ಮೂರ್ತಿಯನ್ನು ಖರೀದಿಸಿದ್ದಾರೆ. ಕುಮಾರತಲಿ ಕೋಲ್ಕತ್ತಾದ ಪ್ರಸಿದ್ಧ ಕುಶಲಕರ್ಮಿಗಳ ಕೇಂದ್ರವಾಗಿದೆ. ವಿಶೇಷವಾಗಿ ನಗರದ ಪ್ರತಿಯೊಂದು ದೊಡ್ಡ ಪೂಜೆಗೆ ಮಣ್ಣಿನ ದುರ್ಗಾ ವಿಗ್ರಹಗಳ ನಿರ್ಮಾಣಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ನಡೆಯುವ ಪೂಜೆಯು ಕೋಮು ಸೌಹಾರ್ದತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ನೆರವಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ರೆಹಮಾನ್ ಹೇಳಿದ್ದಾರೆ. ಅಲಿಮುದ್ದೀನ್ ಪ್ರದೇಶವು ಪ್ರಾಥಮಿಕವಾಗಿ ಕೆಳ-ಮಧ್ಯಮ ವರ್ಗದವರಾಗಿದ್ದು, ಇದರಲ್ಲಿ ಹೆಚ್ಚಾಗಿ ಉರ್ದು ಮಾತನಾಡುವ ಮುಸ್ಲಿಮರಿದ್ದಾರೆ.