
ಅಹಮದ್ ನಗರ: ಮುಸ್ಲಿಂ ವ್ಯಕ್ತಿಯೊಬ್ಬರು ಇಬ್ಬರು ಹಿಂದು ಸಹೋದರಿಯರನ್ನು ದತ್ತು ಪಡೆಯುವ ಮೂಲಕ ಧಾರ್ಮಿಕ ಭಾವೈಕ್ಯತೆಗೆ ಮಾದರಿಯಾಗಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಅಹಮದ್ ನಗರದ ಬಾಬು ಭಾಯಿ ಪಠಾಣ್ ಇಬ್ಬರು ಅನಾಥ ಹಿಂದು ಯುವತಿಯರನ್ನು ದತ್ತು ಪಡೆದು ಹಿಂದು ಸಂಪ್ರದಾಯದಂತೆ ವಿವಾಹ ಮಾಡಿಸಿದ್ದಾರೆ. ತಮ್ಮ ಎಲ್ಲ ಉಳಿತಾಯವನ್ನು ಇಬ್ಬರು ದತ್ತು ಸಹೋದರಿಯರ ಮದುವೆಗಾಗಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಪತ್ರಕರ್ತ ಆರೀಫ್ ಶಾಹ್ ಈ ಸುದ್ದಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಬಾಬು ಭಾಯಿ ಅವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ ಎಂದಿದ್ದಾರೆ.
ಬಾಬು ಭಾಯಿ ಅವರ ಕಾರ್ಯಕ್ಕೆ ನೆಟ್ಟಿಗರು ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳು ವರದಿ ಮಾಡಿದ್ದು, ಇಬ್ಬರು ಯುವತಿಯರಿಗೆ ತಾಯಿ ಇದ್ದಾಳೆ. ಹಾಗೂ ಅವರಿಬ್ಬರು ಬಾಬು ಭಾಯಿ ಅವರಿಗೆ ಪ್ರತಿ ವರ್ಷ ರಕ್ಷಾ ಬಂಧನದ ದಿನ ರಾಖಿ ಕಟ್ಟುತ್ತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
https://twitter.com/aarifshaah/status/1297451867824218114?ref_src=twsrc%5Etfw%7Ctwcamp%5Etweetembed%7Ctwterm%5E1297451867824218114%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fmuslim-man-who-got-his-adopted-hindu-sisters-married-is-the-hero-we-need-2814293.html