ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಸ್ಲಿಂ ಯುವಕನೊಬ್ಬ 800 ಕಿಲೋಮೀಟರ್ ನಡೆದು ಬಂದಿದ್ದಾನೆ. ರಾಮನ ತಾಯಿ ಕೌಸಲ್ಯೆ ಜನಿಸಿದ ಛತ್ತೀಸ್ಗಢದ ಚಂದ್ಕುರಿಯಿಂದ ಈತ ಅಯೋಧ್ಯೆಗೆ ಹೊರಟಿದ್ದಾನೆ.
ಮಧ್ಯಪ್ರದೇಶದ ಅನುಪ್ಪೂರ್ ತಲುಪಿದ ಮೊಹಮ್ಮದ್ ಫೈಜ್ ಖಾನ್ ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ್ದಾನೆ. ನನ್ನ ಹೆಸರು, ನನ್ನ ಧರ್ಮ ಮುಸ್ಲಿಂ. ನಾನು ಭಗವಂತ ರಾಮನ ಭಕ್ತ. ನಮ್ಮ ಪೂರ್ವಜರು ಹಿಂದುಗಳಾಗಿದ್ದರು. ಅವರ ಹೆಸರು ರಾಮ್ ಲಾಲ್ ಹಾಗೂ ಶಾಮ್ ಲಾಲ್. ಚರ್ಚ್ ಗೆ ಹೋಗ್ಲಿ, ಮಸೀದಿಗೆ ಹೋಗ್ಲಿ ನಮ್ಮ ಪೂರ್ವಜರು ಹಿಂದುಗಳು ಎಂದು ಫೈಜ್ ಖಾನ್ ಹೇಳಿದ್ದಾರೆ.
ಫೈಜ್ ದೇವಾಲಯಕ್ಕೆ ಹೋಗ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ದೇವಸ್ಥಾನಕ್ಕೆಂದು 15,000 ಕಿ.ಮೀ. ನಡೆದಿದ್ದರಂತೆ. ಇದು ಬರೀ 800 ಕಿಲೋಮೀಟರ್ ಪ್ರಯಾಣವೆಂದು ಫೈಜ್ ಹೇಳಿದ್ದಾರೆ.