ಬರೋಬ್ಬರಿ 15 ವರ್ಷಗಳ ಹಿಂದೆ ತನ್ನ ಎರಡೂವರೆ ವರ್ಷದ ಹೆಣ್ಣು ಮಗುವನ್ನ ಕಳೆದುಕೊಂಡ ತಾಯಿ ಕೊನೆಗೂ ತನ್ನ ಮಗಳನ್ನ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಮಸೀದಿಯಲ್ಲಿ ಫಾತೀಮಾ ಎಂಬ ಮಗು 15 ವರ್ಷಗಳ ಹಿಂದೆ ನಾಪತ್ತೆಯಾಗಿತ್ತು.
ಆಂಧ್ರಪ್ರದೇಶದ ಕರ್ನೂಲ್ನಲ್ಲಿರುವ ಮುಸ್ಲಿಂ ಕುಟುಂಬ ಕೊನೆಗೂ ಆಕೆಯನ್ನ ಪತ್ತೆ ಹಚ್ಚಿದೆ. ಆದರೆ ಆಕೆಗೆ ಅನಾಥಾಶ್ರಮದಲ್ಲಿ ಹಿಂದೂಗಳು ಸಾಕಿದ್ದಾರೆ. ಹೀಗಾಗಿ ಫಾತಿಮಾ ಈಗ ಸ್ವಪ್ನಾ ಎಂಬ ಹೆಸರನ್ನ ಪಡೆದಿದ್ದಾಳೆ. ಬಹಳ ಚಿಕ್ಕ ವಯಸ್ಸಿಗೆ ತನ್ನ ಕುಟುಂಬದಿಂದ ದೂರಾಗಿದ್ದರಿಂದ ಈಕೆ ತನ್ನ ಮೂಲ ಕುಟುಂಬಸ್ಥರನ್ನ ಗುರುತಿಸುವಲ್ಲಿ ವಿಫಲಳಾಗಿದ್ದಾಳೆ.
ನಾವು ನಮ್ಮ ಸಹೋದರಿಯನ್ನ ಮನೆಗೆ ವಾಪಸ್ ಕರೆದೊಯ್ಯಲಿದ್ದೇವೆ. ಅಲ್ಲಿ ಆಕೆಗೆ ನಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರ ಪರಿಚಯ ಮಾಡಿಸಲಿದ್ದೇವೆ. ಇದಾದ ಬಳಿಕ ಆಕೆಯನ್ನ ಪುನಃ ಅನಾಥಾಶ್ರಮಕ್ಕೆ ಕಳುಹಿಸಿಕೊಡುತ್ತೇವೆ. ಆಕೆಯ ಮೊದಲು ತನ್ನ ವ್ಯಾಸಂಗವನ್ನ ಮುಗಿಸಲಿ ಎಂದು ಸ್ವಪ್ನಾ ಸಹೋದರ ಅಬೀದ್ ಹುಸೇನ್ ಹೇಳಿದರು.
ಆಪರೇಷನ್ ಸ್ಮೈಲ್ ಎಂಬ ಮಕ್ಕಳ ಕಳ್ಳಸಾಗಣೆ ಹಾಗೂ ರಕ್ಷಣೆಯ ಭಾಗವಾಗಿ ಹೈದರಾಬಾದ್ ಪೊಲೀಸರು ಈ ಅನಾಥಾಶ್ರಮಕ್ಕೆ ಭೇಟಿ ನೀಡಿದ್ದರು. ಕರ್ನೂಲ್ನ ಖ್ವಾಜಾ ಮೊಯಿನುದ್ದೀನ್ 2005ರಲ್ಲಿ ಹಸೇನಿಯಾಲಂ ಠಾಣೆಯಲ್ಲಿ ಫಾತಿಮಾ ಕಾಣೆಯಾದ ಬಗ್ಗೆ ದೂರು ನೀಡಿದ್ದರು.
ಫಾತಿಮಾ ತಾಯಿ ಆಕೆಯ ದೇಹದಲ್ಲಿರುವ ಮಚ್ಚೆ ಗುರುತುಗಳ ಬಗ್ಗೆ ಸರಿಯಾದ ಬಗ್ಗೆ ಮಾಹಿತಿ ನೀಡಿದ್ರು. ಇದನ್ನ ಆಧರಿಸಿದ ಪೊಲೀಸರು ತಾಯಿ – ಮಗಳನ್ನ ಒಂದು ಮಾಡಿದ್ದಾರೆ.
ಆಕೆ ಸಂಪೂರ್ಣ ವಿಭಿನ್ನ ಸಂಸ್ಕೃತಿಯಲ್ಲಿ ಬೆಳೆದಿದ್ದಾಳೆ. ಆಕೆ ಈಗ ಸಾಯಿಬಾಬಾನ ಕಟ್ಟಾ ಭಕ್ತೆ. ತನ್ನ ಕುಟುಂಬಸ್ಥರ ಬಗ್ಗೆ ಆಕೆಗೆ ಕಿಂಚಿತ್ತೂ ನೆನಪಿಲ್ಲ. ಈ ಪುರ್ನಮಿಲನವು ತಾಯಿ – ಮಗಳ ಜೀವನದಲ್ಲಿ ಅಸಾಮಾನ್ಯ ತಿರುವಾಗಿದೆ. ಆಕೆಯ ದುರಾದೃಷ್ಟಕ್ಕೆ ಒಂದು ವರ್ಷದ ಹಿಂದೆ ಆಕೆಯ ತಂದೆ ತೀರಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ರು.