ಹರ್ಯಾಣದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಪತ್ನಿ ಮುಂದೆಯೇ ಪತಿಯೊಬ್ಬ ತನ್ನ ಅತ್ತಿಗೆ ಹತ್ಯೆ ಮಾಡಿದ್ದಾನೆ. ಅತ್ತಿಗೆ ದೇಹ ವ್ಯಾಪಾರಕ್ಕೆ ಒಪ್ಪಿಕೊಳ್ಳದಿರುವುದು ಇದಕ್ಕೆ ಕಾರಣವಾಗಿದೆ.
ಅತ್ತಿಗೆಗೆ ಚಾಕು ಇರಿದ ಆರೋಪಿ ಪರಾರಿಯಾಗಿದ್ದ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾಳೆ. ಆರೋಪಿ ಪತ್ನಿ ಬೇರೆ ಮನೆ ಮಾಡಿದ್ದಳಂತೆ. ಆರೋಪಿ ಕುಟುಂಬಸ್ಥರು ದೇಹ ವ್ಯಾಪಾರ ದಂಧೆ ಮಾಡ್ತಿದ್ದರಂತೆ.
ಆರೋಪಿಯ ಪತ್ನಿ ಹಾಗೂ ಹಿರಿಯ ಸೊಸೆಗೂ ದೇಹ ವ್ಯಾಪಾರ ಮಾಡುವಂತೆ ಒತ್ತಡ ಹೇರಿದ್ದರಂತೆ. ಇದೇ ಕಾರಣಕ್ಕೆ ಇಬ್ಬರು ಬೇರೆ ಮನೆ ಮಾಡಿ ವಾಸ ಶುರು ಮಾಡಿದ್ದರಂತೆ. ಘಟನೆ ನಡೆದ ದಿನ ಇಬ್ಬರೂ ಮಕ್ಕಳಿಗೆ ಔಷಧಿ ತರಲು ಹೊರಟಿದ್ದರಂತೆ. ಈ ವೇಳೆ ಸ್ಥಳಕ್ಕೆ ಬಂದ ಆರೋಪಿ ಪತ್ನಿ ಮೇಲೆ ಹಲ್ಲೆ ನಡೆಸಿ ಅತ್ತಿಗೆಗೆ ಚಾಕು ಇರಿದಿದ್ದಾನೆ.