ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ವಿವಾಹಿತೆಯನ್ನು ಪ್ರಿಯಕರನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. 21 ವರ್ಷದ ತೇಜಸ್ವಿನಿ ಕೊಲೆಯಾದ ವಿವಾಹಿತೆ. ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೇ ಕೊಲೆ ಆರೋಪಿಯಾಗಿದ್ದಾನೆ.
ತೇಜಸ್ವಿನಿ ಮದುವೆಯಾಗಿದ್ದರೂ ಗಂಡನಿಂದ ದೂರವಾಗಿದ್ದಳು. ತಂದೆ-ತಾಯಿಯೊಂದಿಗೆ ವಾಸವಾಗಿದ್ದ ಆಕೆ ತನ್ನ ಸಂಬಂಧಿಯೇ ಆಗಿದ್ದ 25 ವರ್ಷದ ದುರ್ಗಾ ಪ್ರಸಾದ್ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ದುರ್ಗಾ ಪ್ರಸಾದ್ ಸಂಬಂಧ ಮುಂದುವರೆಸಿದ್ದ.
ಇತ್ತೀಚೆಗೆ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ ದುರ್ಗಾಪ್ರಸಾದ್ ತೇಜಸ್ವಿನಿಯಿಂದ ದೂರವಾಗಲು ಪ್ರಯತ್ನ ನಡೆಸಿದ್ದ. ತೇಜಸ್ವಿನಿ ಅಜ್ಜ-ಅಜ್ಜಿಯ ಮನೆಗೆ ಬಂದು ಮನೆಯ ಹೊರಗೆ ಫೋನ್ನಲ್ಲಿ ಹಾಡು ಕೇಳುತ್ತಾ ಮಲಗಿದ್ದ ವೇಳೆ ಏಕಾಏಕಿ ಬಂದ ದುರ್ಗಾ ಪ್ರಸಾದ್ ಹೊಟ್ಟೆ ಮತ್ತು ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತೇಜಸ್ವಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪರಾರಿಯಾಗಿದ್ದ ದುರ್ಗಾ ಪ್ರಸಾದ್ ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ.