ದೇಶಾದ್ಯಂತ ಕೋವಿಡ್ ಪ್ರಕರಣಗಳು ದಿನೇ ದಿನೇ ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕಾ ಕಾರ್ಯಕ್ರಮ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇದಕ್ಕೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವುದು ದೊಡ್ಡ ಹೊಣೆಗಾರಿಕೆಯಾಗಿದೆ.
ಈ ಸಮಸ್ಯೆಯನ್ನು ನಿರ್ವಹಿಸಲು ಸ್ಮಾರ್ಟ್ ಐಡಿಯಾ ಒಂದನ್ನು ಮಾಡಿರುವ ಬೃಹನ್ಮುಂಬಯಿ ನಗರ ಪಾಲಿಕೆ ಡ್ರೈವ್-ಇನ್ ಲಸಿಕೆ ಕೇಂದ್ರಗಳಿಗೆ ಚಾಲನೆ ಕೊಟ್ಟಿದೆ. ನಗರದ ಮೊದಲ ಡ್ರೈವ್-ಇನ್ ಲಸಿಕಾ ಕೇಂದ್ರವನ್ನು ದಾದರ್ನ ಜೆಕೆ ಸಾವಂತ್ ಮಾರ್ಗದಲ್ಲಿ ಚಾಲನೆ ಕೊಡಲಾಗಿದೆ. ಮೊದಲ ದಿನವೇ ಈ ಕೇಂದ್ರದಲ್ಲಿ 417 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.
ʼಕೊರೊನಾʼ ಸಂಕಷ್ಟದ ಸಂದರ್ಭದಲ್ಲಿ ಜನ ಮೆಚ್ಚುವ ಕಾರ್ಯ ಮಾಡಿದೆ ಈ ಪಂಚಾಯಿತಿ
ಈ ಮೊಬೈಲ್ ಕೇಂದ್ರಗಳಲ್ಲಿ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಯಾವುದೇ ಸರತಿಯ ಗೋಜಿಲ್ಲದೇ ಆರಾಮವಾಗಿ ಕುಳಿತು ಕೋವಿಡ್-19 ಲಸಿಕೆಗಳನ್ನು ಹಾಕಿಸಿಕೊಳ್ಳಬಹುದಾಗಿದೆ.
ಈ ಅಭಿಯಾನವನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಮಹಿಂದ್ರಾ & ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ, ಪಾಲಿಕೆಯ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ರನ್ನು ಮೆಚ್ಚಿ ಟ್ವಿಟ್ ಮಾಡಿದ್ದಾರೆ.