alex Certify ಶಿಕ್ಷಕಿ ಪ್ರಶ್ನೆಗೆ ಉತ್ತರಿಸದ ಮಗಳಿಗೆ ಪೆನ್ಸಿಲ್‌ ನಿಂದ ಇರಿದ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕಿ ಪ್ರಶ್ನೆಗೆ ಉತ್ತರಿಸದ ಮಗಳಿಗೆ ಪೆನ್ಸಿಲ್‌ ನಿಂದ ಇರಿದ ತಾಯಿ

ಆನ್ಲೈನ್ ಕ್ಲಾಸ್ ವೇಳೆ ಗಮನ ಹರಿಸುತ್ತಿಲ್ಲ ಎಂಬ ಕಾರಣಕ್ಕೆ ಮಗಳ ಮೇಲೆ ಕೆಟ್ಟ ಮಟ್ಟದಲ್ಲಿ ದೈಹಿಕ ಹಲ್ಲೆ ಮಾಡಿದ ತಾಯಿಯೊಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮುಂಬೈನ ಸಾಂತಾಕ್ರೂಝ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

ಆನ್ಲೈನ್ನ ಕ್ಲಾಸ್ ವೇಳೆ ಶಿಕ್ಷಕಿ ಕೇಳಿದ ಪ್ರಶ್ನೆಗೆ ಉತ್ತರಿಸಲು ಆರನೇ ತರಗತಿಯಲ್ಲಿ ಓದುತ್ತಿರುವ ತನ್ನ ಮಗಳು ವಿಫಲಳಾದಳು ಎಂಬ ಕಾರಣಕ್ಕೆ ಪೆನ್ಸಿಲ್‌ನಿಂದ ಮಗಳಿಗೆ ಚುಚ್ಚಿದ ಈ ಮಹಾತಾಯಿ ಬಳಿಕ ಆಕೆಯನ್ನು ಕಚ್ಚಿದ್ದಾಳೆ. ಈ ಘಟನೆಯನ್ನು ವೀಕ್ಷಿಸಿದ ಬಾಲಕಿಯ ತಂಗಿ ಕೂಡಲೇ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಿ ದೂರು ಕೊಟ್ಟಿದ್ದಾಳೆ.

ಇದಾದ ಬೆನ್ನಿಗೆ NGO ಒಂದರ ಇಬ್ಬರು ಪ್ರತಿನಿಧಿಗಳು ಬಾಲಕಿಯ ಮನೆಗೆ ಭೇಟಿ ನೀಡಿ ಆಕೆಯ ತಾಯಿಗೆ ಬುದ್ಧಿ ಹೇಳಲು ಮುಂದಾಗಿದ್ದಾರೆ. ಆದರೆ ಆಕೆಯ ತಾಯಿ ತನ್ನ ನಡೆಯನ್ನು ಸಮರ್ಥನೆ ಮಾಡಿಕೊಂಡ ಕಾರಣ ಆಕೆಯ ವಿರುದ್ಧ ಕೇಸು ದಾಖಲಿಸಲಾಗಿದ್ದು, ಆಕೆಯ ಬಂಧನ ಇನ್ನೂ ಆಗಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...