ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದ ಮುಂಬಯಿಯ ಯುವತಿಯೊಬ್ಬರನ್ನು ಬಂಧಿಸಲಾಗಿದೆ. ಘಟನೆ ವಿಡಿಯೋ ವೈರಲ್ ಆಗಿದೆ.
ಇಲ್ಲಿನ ಎಲ್.ಟಿ. ಮಾರ್ಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, 32 ವರ್ಷದ ಮೋಹ್ಸಿನ್ ಶೇಖ್ ಎಂಬಾತನ ದ್ವಿಚಕ್ರ ವಾಹನದ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸಾಗರಿಕಾ ತಿವಾರಿ ಹೆಲ್ಮೆಟ್ ಹಾಕಿರಲಿಲ್ಲ. ಇದನ್ನು ಕೇಳಲು ಮುಂದಾದ ಪೊಲೀಸ್ ಪೇದೆ ಏಕ್ನಾಥ್ ಪಾರ್ಟೆ ಜೊತೆಗೆ ವಾಗ್ವಾದ ನಡೆದ ಬಳಿಕ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಸಾಗರಿಕಾ.
ಸಮವಸ್ತ್ರಧಾರಿಯಾಗಿದ್ದ ಪೊಲೀಸಪ್ಪನಿಗೇ ಕುತ್ತಿಗೆ ಪಟ್ಟಿ ಹಿಡಿದುಕೊಂಡು ಪದೇ ಪದೇ ಬಾರಿಸಿದ ಸಾಗರಿಕಾರನ್ನು ಅಲ್ಲಿಯೇ ಇದ್ದ ಇತರ ಸಿಬ್ಬಂದಿ ಬಂದು ಬಿಡಿಸಿದ್ದಾರೆ. ತಿವಾರಿ ಹಾಗೂ ಶೇಖ್ರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿದೆ.