ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಉದ್ಯೋಗವನ್ನ ಕಳೆದುಕೊಂಡಿದ್ದ ಮಹಿಳೆಗೆ ಮಹಾರಾಷ್ಟ್ರದ ಮಲಾಡ್ನ ದಂಪತಿ ಆಶ್ರಯ ನೀಡಿದ್ದರ ತಪ್ಪಿಗೆ ಭಾರೀ ದಂಡ ತೆತ್ತಿದ್ದಾರೆ.
ಮಲಾಡ್ ದಂಪತಿ ಮನೆಯಲ್ಲಿ ಆಶ್ರಯ ಪಡೆದಿದ್ದ ಮಹಿಳೆ ಯಾರೂ ಇಲ್ಲದ ಸಮಯ ನೋಡಿ ಅವರ ಒಂದು ವರ್ಷದ ಹೆಣ್ಣು ಮಗುವನ್ನ ಅಪಹರಿಸಿದ್ದಾಳೆ.
48 ಗಂಟೆಗಳ ಕಾರ್ಯಾಚರಣೆಯ ಬಳಿ ಆಕೆ ಮಹಾರಾಷ್ಟ್ರ ತೊರೆಯಲು ಸಿದ್ಧತೆ ಮಾಡ್ತಿದ್ದ ವೇಳೆ ಪೊಲೀಸರು ಆಕೆಯನ್ನ ಬಂಧಿಸಿದ್ದಾರೆ.
ಮಕ್ಕಳಿಲ್ಲದ ಆರೋಪಿ ಸಪ್ನಾ ನಾಯಕ್ ಓಡಿಶಾದಲ್ಲಿರುವ ತನ್ನ ಕುಟುಂಬಸ್ಥರ ಬಳಿ ತನಗೆ 1 ವರ್ಷದ ಶಿಶು ಇದೆ ಎಂದು ಸುಳ್ಳು ಹೇಳಿದ್ದಳು.
ಮಗುವಿಗಾಗಿ ಹತಾಶಳಾಗಿದ್ದ ಸಪ್ನಾ ಮಲಾಡ್ನಲ್ಲಿರುವ ಅಶೋಕ್ ರಾಥೋಡ್ ಹಾಗೂ ಪೂಜಾ ಮನೆಯಲ್ಲಿ ಉಳಿಯುವ ಅವಕಾಶವನ್ನ ಗಿಟ್ಟಿಸಿಕೊಂಡಳು.
ಈ ವಿಚಾರವಾಗಿ ಮಾತನಾಡಿದ ಪೂಜಾ, ನನ್ನ ಪತಿ ನಡೆಸುತ್ತಿರುವ ಟೇಲರಿಂಗ್ ಶಾಪ್ ಇರುವ ಕಟ್ಟಡದಲ್ಲೇ ಈಕೆ ಕೂಡ ಕೆಲಸ ಮಾಡುತ್ತಿದ್ದಳು. ಆಗಾಗ ಪತಿಯ ಅಂಗಡಿಗೆ ಬರ್ತಿದ್ದ ಈಕೆ ತನಗೆ ಮಾಲೀಕರಿಂದ ಕಿರುಕುಳ ಇದೆ ಅಂತಾ ಹೇಳಿಕೊಳ್ತಿದ್ದಳು. ಕಳೆದ ವಾರ ಅಶೋಕ್ ಬಳಿ ತಾನು ಕೆಲಸ ತ್ಯಜಿಸಿದ್ದೇನೆ ಎಂದು ಹೇಳಿದ್ದಳು.
ಒಂದು ರಾತ್ರಿ ನಮ್ಮ ಮನೆಯಲ್ಲಿ ಉಳಿಯುವಂತೆ ಅವಕಾಶ ಕೇಳಿದ್ದಳು. ನಾವು ಕೂಡ ಕರುಣೆ ತೋರಿ ಆಕೆಗೆ ಅನುಮತಿ ನೀಡಿದೆವು. ಇಬ್ಬರು ಮಕ್ಕಳೊಂದಿಗೆ ಆಟವಾಡುತ್ತಿದ್ದ ಈಕೆ ಸಂಜೆ 6.30ರ ಸುಮಾರಿಗೆ ನನ್ನ ಶಿಶುವಿನೊಂದಿಗೆ ನಾಪತ್ತೆಯಾದಳು. ಅಲ್ಲದೇ ಆಕೆ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು ಎಂದು ಹೇಳಿದರು.
ಸಪ್ನಾ ಆಗಾಗ ತನ್ನ ಫೋನ್ನ್ನ ಆನ್ ಮಾಡುತ್ತಿದ್ದಳು. ಪ್ರತಿ ಬಾರಿಯೂ ಆಕೆ ಇರುವ ಸ್ಥಳ ವಿಭಿನ್ನವಾಗಿರುತ್ತಿತ್ತು. ಆದರೆ ಊರಿಗೆ ಹೋಗಲು ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗದ ಕಾರಣ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ವಿಚಾರಣೆ ವೇಳೆ ಅಪಹರಣದ ಕಾರಣ ಬಿಚ್ಚಿಟ್ಟ ಸಪ್ನಾ, ತಾನು 2 ವರ್ಷದ ಹಿಂದೆ ಮುಂಬೈಗೆ ಬಂದ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದೆ. ಆದರೆ ನಾನು ಮಗುವನ್ನ ಕಳೆದುಕೊಂಡೆ. ಇದನ್ನ ಮನೆಯವರ ಮುಂದೆ ಹೇಳಲು ನನಗೆ ಧೈರ್ಯ ಸಾಲಲಿಲ್ಲ. ನನ್ನ ಪತಿ ಮಗು ಇಲ್ಲದೇ ಮನೆಗೆ ಬರಬೇಡ ಅಂತಾ ತಾಕೀತು ಮಾಡಿದ್ದ. ಹೀಗಾಗಿ ಈ ಕೆಲಸ ಮಾಡಿದೆ ಎಂದು ಹೇಳಿದ್ದಾಳೆ.