alex Certify ನಾಪತ್ತೆಯಾದ್ಲು ಹರೆಯದ ಹುಡುಗಿ, ತನಿಖೆಯಲ್ಲಿ ಬಯಲಾಯ್ತು ಗೆಳೆಯನ ಅಸಲಿಯತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಪತ್ತೆಯಾದ್ಲು ಹರೆಯದ ಹುಡುಗಿ, ತನಿಖೆಯಲ್ಲಿ ಬಯಲಾಯ್ತು ಗೆಳೆಯನ ಅಸಲಿಯತ್ತು

ಮುಂಬೈ: ಸೆಂಟ್ರಲ್ ಮುಂಬೈನ ಅಗ್ರಿಪಾಡಾದಿಂದ 13 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಫೇಸ್ಬುಕ್ ಸ್ನೇಹಿತ ಸೇರಿದಂತೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಪ್ರತ್ಯೇಕ ದಾಳಿ ನಡೆಸಿ 22 ವರ್ಷದ ಮುಖ್ಯ ಆರೋಪಿ ಮತ್ತು ಆತನ ನಾಲ್ವರು ಸಹಚರರನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯ ವೇಳೆ ಸಂತ್ರಸ್ಥೆಯನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಜುಲೈ 1 ರಂದು ಮನೆಯಿಂದ ಬಾಲಕಿ ನಾಪತ್ತೆಯಾಗಿದ್ದು, ತಾಯಿ ದೂರು ನೀಡಿದ್ದರು. ಬಾಲಕಿ ಫೇಸ್ಬುಕ್ನಲ್ಲಿ ಮುಖ್ಯ ಆರೋಪಿಯೊಂದಿಗೆ ಗೆಳೆತನ ಹೊಂದಿದ್ದಳು ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ. ಬಾಲಕಿಯ ಪತ್ತೆಗೆ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು ರಾಜಸ್ಥಾನದ ಜಾಲ್ವಾಡ್ ಮತ್ತು ಮಧ್ಯಪ್ರದೇಶದ ರಾಜ್ ಘರ್ ನಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಮುಖ್ಯ ಆರೋಪಿ ಸಹಚರರ ನೆರವಿನಿಂದ ಬಾಲಕಿಯನ್ನು ರಾಜಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ. ಅವರು ತೆರಳುತ್ತಿದ್ದ ವಾಹನವನ್ನು ದಾರಿಯುದ್ದಕ್ಕೂ ಎಲ್ಲಿಯೂ ತಡೆಹಿಡಿಯಲಾಗಿಲ್ಲ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...