alex Certify ಬಡತನದಲ್ಲೂ ಸ್ವಾಭಿಮಾನ ಮೆರೆದ ವೃದ್ದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡತನದಲ್ಲೂ ಸ್ವಾಭಿಮಾನ ಮೆರೆದ ವೃದ್ದ

ತಮ್ಮ ಡಾಬಾ ಚೆನ್ನಾಗಿ ನಡೀತಾ ಇಲ್ಲ ಅಂತಾ ಕಣ್ಣೀರು ಹಾಕಿದ್ದ ವೃದ್ಧ ದಂಪತಿ ವಿಡಿಯೋ ವೈರಲ್​ ಆಗ್ತಿದ್ದಂತೆ ಸಾಕಷ್ಟು ಕಡೆಯಿಂದ ನೆರವಿನ ಮಹಾಪೂರ ಹರಿದು ಬಂದ ಕತೆ ನಿಮಗೆಲ್ಲ ಗೊತ್ತೇ ಇದೆ. ದೆಹಲಿಯಲ್ಲಿ ಈ ವಿಡಿಯೋ ವೈರಲ್​ ಆಗಿದ್ದೇ ತಡ ಇಂತಹ ಅನೇಕ ಬಡ ಉದ್ಯೋಗಿಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ಸಹಾಯ ಹಸ್ತ ಚಾಚಲಾಗಿತ್ತು.

ಅದೇ ರೀತಿ ಮುಂಬೈನಲ್ಲೂ ಕೂಡ ಒಬ್ಬ ಕೀ ಚೈನ್​ ಮಾರುವ 80 ವರ್ಷದ ವೃದ್ಧನ ವಿಡಿಯೋ ವೈರಲ್​ ಮಾಡಲಾಗಿತ್ತು. ಬಿಂಡಿ ಬಜಾರ್​ನಲ್ಲಿ ಕೀ ಮಾರುವ ಇಸ್ಮಾಯಿಲ್​ ಚಾಚಾಗೆ ನೆರವು ನೀಡಬೇಕು ಅಂತಾ ಇಸ್ಮಾಯಿಲ್​ ಕಿ ಸ್ಮೈಲ್​ ಎಂಬ ಹ್ಯಾಶ್​ಟ್ಯಾಗ್​ ನಡಿ ವಿಡಿಯೋ ಶೇರ್​ ಮಾಡಲಾಗಿತ್ತು. ಈ ವಿಡಿಯೋ ನೋಡಿದ ಅನೇಕು ಇಸ್ಮಾಯಿಲ್​ ಚಾಚಾರನ್ನ ಭೇಟಿ ಮಾಡೋಕೆ ಬಿಂಡಿ ಬಜಾರ್​ಗೆ ತೆರಳಿದ್ರು.

ಆದರೆ ತನ್ನ ಭೇಟಿಯಾಗಿ ಹಣ ಸಹಾಯ ಮಾಡೋಕೆ ಬಂದವರಿಗೆ ಇಸ್ಮಾಯಿಲ್​ ಚಾಚಾ ನೋ ಎಂದಿದ್ದಾರೆ. ನಿಮಗೆ ನನಗೆ ಸಹಾಯ ಮಾಡಲೇಬೇಕು ಅಂತಿದ್ರೆ ನನ್ನ ಕೀ ಚೈನ್​​ನ್ನ ಖರೀದಿಸಿ ಬಳಿಕ ಹಣ ನೀಡಿ. ಸುಮ್ಮನೇ ನೀವು ನೀಡಿದ ಹಣವನ್ನ ನಾನು ಸ್ವೀಕರಿಸಲ್ಲ ಅಂತಾ ಪ್ರೀತಿಯಿಂದಲೇ ನಿರಾಕರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...