ಬರೋಬ್ಬರಿ 11 ವಾರಗಳ ಬಳಿಕ ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾದ ಕೊರೊನಾ ಕೇಸ್ಗಳ ಸಂಖ್ಯೆ 1000ಕ್ಕಿಂತ ಕಡಿಮೆ ವರದಿಯಾಗಿದೆ. ಮುಂಬೈ ಶುಕ್ರವಾರ 929 ಕೊರೊನಾ ಪ್ರಕರಣಗಳನ್ನ ವರದಿ ಮಾಡಿದೆ. ಇದು ಮಾರ್ಚ್ 2ರ ಬಳಿಕ ವರದಿಯಾದ ಅತ್ಯಂತ ಕಡಿಮೆ ಕೊರೊನಾ ಪ್ರಕರಣವಾಗಿದೆ.
ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ 30 ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಅಲ್ಲದೇ ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಸಹ 94 ಪ್ರತಿಶತಕ್ಕೆ ಏರಿಕೆ ಕಂಡಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಮಾರ್ಚ್ 2ರಲ್ಲಿ ಮುಂಬೈನಲ್ಲಿ 849 ಕೊರೊನಾ ಪ್ರಕರಣಗಳು ವರದಿಯಾಗಿದ್ದವು. ಇದಾದ ಬಳಿಕ ಕೊರೊನಾ ಪ್ರಕರಣಗಳು 1000ಕ್ಕಿಂತ ಹೆಚ್ಚು ವರದಿಯಾಗುತ್ತಿದ್ದವು.
ಮಹಾರಾಷ್ಟ್ರದಲ್ಲಿ 10 ರಿಂದ 15 ಜಿಲ್ಲೆಗಳಲ್ಲಿ ಕೊರೊನಾ ಸೊಂಕಿನ ಪ್ರಮಾಣ ಇನ್ನೂ ಹೆಚ್ಚಿದೆ. ಅಲ್ಲದೇ ಇದರ ಜೊತೆಯಲ್ಲಿ ಹೆಚ್ಚುತ್ತಿರುವ ಬ್ಲಾಕ್ ಫಂಗಸ್ ಸಹ ಆತಂಕಕ್ಕೆ ಕಾರಣವಾಗಿದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದರು.
ಕೊರೊನಾ ಎರಡನೆ ಅಲೆ ವಿರುದ್ಧ ಹೋರಾಡುತ್ತಿರುವ ಮಹಾರಾಷ್ಟ್ರ ಏಪ್ರಿಲ್ ಮಧ್ಯವಾರದಿಂದಲೇ ಲಾಕ್ಡೌನ್ ಆದೇಶ ಜಾರಿ ಮಾಡಿದೆ.