ವಾಣಿಜ್ಯ ನಗರಿ ಮುಂಬೈ ಮಂಗಳವಾರ ಈ ಋತುವಿನ ಕಡಿಮೆ ತಾಪಮಾನ 16 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಿಸಿದೆ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಮುಂಬೈ ಹೊರತಾಗಿ ಮಹಾರಾಷ್ಟ್ರದ ಹಲವಾರು ಭಾಗಗಳಲ್ಲಿಯೂ ತಾಪಮಾನ ಕಡಿಮೆಯಾಗಿದ್ದು ಚಳಿ ಹಾಗೂ ಶೀತ ಗಾಳಿ ಬೀಸಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ 2 ಡಿಗ್ರಿ ಕಡಿಮೆ ಎಂದು ಭಾರತೀಯ ಹವಾಮಾನ ಇಲಾಖೆ ಮುಂಬೈ ವಿಭಾಗದ ಉಪಮಹಾನಿರ್ದೇಶಕ ಕೆ.ಎಸ್. ಹೊಸಾಲಿಕರ್ ಹೇಳಿದ್ದಾರೆ.
ಮುಂಬೈ ಪಕ್ಕದ ಥಾನೆ ಕನಿಷ್ಟ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿದೆ. ನಾಸಿಕ್ನಲ್ಲಿ 8.4 ಡಿಗ್ರಿ ಸೆಲ್ಸಿಯಸ್ ಹಾಗೂ ಜಲ್ಗಾವ್ನಲ್ಲಿ 9 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗಿದೆ.