ಸಾಮಾಜಿಕ ಜಾಲತಾಣದಲ್ಲಿ ಯಾವುದು ಯಾವಾಗ ವೈರಲ್ ಆಗುತ್ತದೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ.
ಇದೀಗ ಇದೇ ರೀತಿ ಟ್ವೀಟರ್ನಲ್ಲಿ ಬಿನೋದ್ ಎನ್ನುವ ಹ್ಯಾಷ್ಟ್ಯಾಗ್ ಇಡೀ ದಿನ ವೈರಲ್ ಆಗಿದೆ. ಆದರೆ ಈ ಬಿನೋದ್ ಯಾರು ಎನ್ನುವುದು ಯಾರಿಗೂ ತಿಳಿದಿಲ್ಲ. ವ್ಯಕ್ತಿಯೊಬ್ಬ ಬಿನೋದ್ ಎಂದು ಶುರು ಮಾಡಿದ ಹ್ಯಾಷ್ಟ್ಯಾಗ್ ಇಡೀ ದಿನ ವೈರಲ್ ಆಗಿ, ಪೇಟಿಯಂ, ಟಿಂಡರ್ನಿಂದ ಹಿಡಿದು ಮುಂಬೈ ಪೊಲೀಸ್ ತನಕ ಈ ಹ್ಯಾಷ್ ಟ್ಯಾಗ್ ಬಳಸಿದ್ದಾರೆ.
ಬಿನೋದ್ ಎಂದು ಹ್ಯಾಷ್ಟ್ಯಾಗ್ ಬಂದ ಬಳಿಕ, ವ್ಯಕ್ತಿಯೊಬ್ಬ ಪೇಟಿಯಂಗೆ ಟ್ಯಾಗ್ ಮಾಡಿ ಹೆಸರು ಬದಲಾಯಿಸಲು ಸಾಧ್ಯವೇ ಎಂದಿದ್ದಾರೆ. ಅದಕ್ಕೆ ಪೇಟಿಯಂ ತನ್ನ ಖಾತೆಯ ಹೆಸರನ್ನೇ ಬದಲಿಸಿದೆ. ಡೇಟಿಂಗ್ ಆ್ಯಪ್ ಆಗಿರುವ ಟಿಂಡರ್, ಬಿನೋದ್ಗೆ ಒಬ್ಬ ಹುಡುಗಿಯನ್ನು ಹುಡುಕಿಕೊಟ್ಟಿದೆ.
ನಂತರ ಈ ವೈರಲ್ ಟ್ರೆಂಡ್ ಬಳಸಿಕೊಂಡ ಮುಂಬೈ ಪೊಲೀಸ್ ಬಿನೋದ್ ಎನ್ನುವುದು ವ್ಯಕ್ತಿಯೊಬ್ಬರ ಪಾಸ್ ವರ್ಡ್ ಆಗಿದ್ದರೆ ವೈರಲ್ ಆಗಿರುವುದರಿಂದ ಬದಲಿಸುವಂತೆ ಜಾಗೃತಿ ಮೂಡಿಸಿದರೆ, ಉತ್ತರಪ್ರದೇಶ, ಪುಣೆ ಪೊಲೀಸರು ಈ ಟ್ಯಾಗ್ ಬಳಸಿಕೊಂಡು ಕೊರೊನಾ ಜಾಗೃತಿಯನ್ನು ಮೂಡಿಸಿದ್ದಾರೆ. ಆದರೆ ಈಗಲೂ ಈ ಬಿನೋದ್ ಯಾರು ಎನ್ನುವುದೇ ನಿಗೂಢ