ಮುಂಬೈ: ಮುಂಬೈ ಪೊಲೀಸ್ ಇಲಾಖೆ ಜಾಲತಾಣಗಳಲ್ಲಿ ಅತಿ ಕ್ರಿಯಾಶೀಲವಾಗಿದೆ. ಕೊರೊನಾ ವೈರಸ್ ನಿಯಂತ್ರಣ ವಿಧಾನಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ.
ಎರಡು ದಿನಗಳ ಹಿಂದೆ ಹಾಲಿವುಡ್ ನ ಬ್ಯಾಟ್ ಮ್ಯಾನ್ ಚಿತ್ರದ ಪ್ರಸಿದ್ಧ ಹೇಳಿಕೆಯನ್ನು ಟ್ವೀಟ್ ಮಾಡಿ ಮುಂಬೈ ಪೊಲೀಸ್ ಇಲಾಖೆ ಗಮನ ಸೆಳೆದಿತ್ತು.
ಈಗ ಮಾಸ್ಕ್ ಧರಿಸುವ ವಿಧಾನದ ಕುರಿತು ಮೂರು ಫೋಟೋಗಳನ್ನು ಟ್ವೀಟ್ ಮಾಡಿದ್ದು, ಯಾವ ವಿಧಾನ ತಪ್ಪು ಯಾವುದು ಸರಿ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.
ಈ ಹಿಂದೆಯೂ ಪೊಲೀಸ್ ಇಲಾಖೆ ಸಾಕಷ್ಟು ಮಿಮ್ಸ್ ಗಳನ್ನು ಹಾಕಿ ಕೊರೊನಾ ಜಾಗೃತಿ ಮೂಡಿಸಿತ್ತು. ಈಗ ಹಾಕಿದ ಪೋಸ್ಟ್ ಗೆ ಹಲವರು ದೊಡ್ಡ ಇಮೋಜಿಗಳನ್ನು ಹಾಕಿ ಬೆಂಬಲ ವ್ಯಕ್ತಪಡಿಸಿದ್ದಾರೆ.
https://www.instagram.com/p/CEV34n6FnbL/?utm_source=ig_embed
https://twitter.com/MumbaiPolice/status/1297737949618962434?ref_src=twsrc%5Etfw%7Ctwcamp%5Etweetembed%7Ctwterm%5E1297737949618962434%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fmumbai-police-shares-advisory-on-how-not-to-wear-face-masks-for-covidiots-2821803.html