alex Certify ಬರ್ತಡೇ ಪಾರ್ಟಿ ನಿರಾಕರಿಸಿದ ಯುವತಿಗೆ ಪೊಲೀಸರೇ ಕಳುಹಿಸಿದ್ರು ಕೇಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರ್ತಡೇ ಪಾರ್ಟಿ ನಿರಾಕರಿಸಿದ ಯುವತಿಗೆ ಪೊಲೀಸರೇ ಕಳುಹಿಸಿದ್ರು ಕೇಕ್​..!

ದೇಶದಲ್ಲಿ ಕೊರೊನಾ ವೈರಸ್​ನಿಂದ ಕಂಗೆಟ್ಟ ರಾಜ್ಯಗಳ ಸಾಲಿನಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಡೆಡ್ಲಿ ವೈರಸ್​ ಹಾವಳಿ ತಪ್ಪಿಸೋಕೆ ಮಹಾರಾಷ್ಟ್ರ ಸರ್ಕಾರ ಸಾಕಷ್ಟು ಕ್ರಮಗಳನ್ನ ಕೈಗೊಳ್ತಿದೆ.

ಈ ನಡುವೆ ಮುಂಬೈ ಪೊಲೀಸರು ಕೂಡ ಜನರ ಸುರಕ್ಷತೆ ಕಡೆ ಗಮನ ಹರಿಸೋದ್ರ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಜಾಗೃತಿ ಮೂಡಿಸುವ ಕಾರ್ಯ ಮಾಡ್ತಿದ್ದಾರೆ.

ರಸ್ತೆಗಳಲ್ಲಿ ತುರ್ತು ಸೇವಾ ವಾಹನಗಳು ಮಾತ್ರ ಸಂಚರಿಸುತ್ತಿವೆ ಎಂಬುದನ್ನ ದೃಢೀಕರಿಸುವ ಸಲುವಾಗಿ ಮುಂಬೈ ಪೊಲೀಸ್​ ಇಲಾಖೆ ಕಲರ್​ ಕೋಡೆಡ್​ ಸ್ಟಿಕರ್​ಗಳನ್ನ ಜಾರಿಗೆ ತಂದಿದೆ. ಜನರಿಗೆ ಇಂತಹ ಕಠಿಣ ಸಂದರ್ಭದಲ್ಲಿಯೂ ತುರ್ತು ಸೇವೆಗಳು ತಲುಪುವಂತೆ ಮಾಡಲು ಮುಂಬೈ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಸೇವೆ ಎಷ್ಟರ ಮಟ್ಟಿಗೆ ಅಂದರೆ ಮುಂಬೈ ಪೊಲೀಸರು ಜನ ಸಾಮಾನ್ಯರ ಬರ್ತಡೇ ಕೇಕ್​ಗಳನ್ನೂ ತಲುಪಿಸಿದ್ದಾರೆ..!

ಗುರುವಾರ ಟ್ವಿಟರ್​ ಪೋಸ್ಟ್​​ನಲ್ಲಿ ಮುಂಬೈ ಪೊಲೀಸರನ್ನ ಟ್ಯಾಗ್​ ಮಾಡಿದ ಬಳಕೆದಾರರೊಬ್ಬರು ಸ್ನೇಹಿತರನ್ನ ಭೇಟಿಯಾಗಲು ಯಾವ ಕಲರ್​ ಸ್ಟಿಕರ್​ನ್ನು ವಾಹನಕ್ಕೆ ಅಳವಡಿಸಬೇಕು..? ಎಂದು ಪ್ರಶ್ನೆ ಮಾಡಿದ್ದರು.

@samsays ಎಂಬ ಟ್ವೀಟರ್​ ಬಳಕೆದಾರರು ತಾವು ಲಾಕ್​ಡೌನ್​ ನಿಯಮದಂತೆಯೇ ಗೆಳೆಯರಿಗೆ ಬರ್ತಡೇ ಪಾರ್ಟಿಗೆ ನಿರಾಕರಿಸಿರುವ ಬಗ್ಗೆ ಸ್ಕ್ರೀನ್​ ಶಾಟ್​ ಒಂದನ್ನ ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ ಶೇರ್​ ಮಾಡಿದ್ದಾರೆ.

ಮುಂಬೈ ಪೊಲೀಸರು @samsays ಜನ್ಮ ದಿನಕ್ಕೆ ಕೇಕ್​ ಕಳುಹಿಸಿಕೊಟ್ಟಿದ್ದು ಪ್ರಜ್ಞಾವಂತ ನಾಗರೀಕ ಎಂದು ಕೇಕ್​ ಮೇಲೆ ಬರೆಯಲಾಗಿದೆ. ಈ ಕೇಕ್​ನ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ @samsays ಮುಂಬೈ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...