
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಜನರಿಗೆ ಕಾನೂನು ಪಾಲನೆ ಬಗ್ಗೆ ಅರಿವು ಮೂಡಿಸುವ ಮುಂಬೈ ಪೊಲೀಸ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಸಾಕಷ್ಟು ಟ್ವೀಟ್‌ಗಳು ವೈರಲ್ ಆಗುತ್ತಲೇ ಇರುತ್ತವೆ.
ಡಿಸೆಂಬರ್ 31ರಂದು ಮನೆಗಳಲ್ಲೇ ಇದ್ದುಕೊಂಡು ಹೊಸ ವರ್ಷ ಆಚರಿಸುವ ಮೂಲಕ ಕೋವಿಡ್-19 ಸೋಂಕು ತಗುಲಿಸಿಕೊಳ್ಳುವ ರಿಸ್ಕ್ ತೆಗೆದುಕೊಳ್ಳದೇ ಇರಲು ಮುಂಬೈ ಪೊಲೀಸರು ಬಹಳ ಫನ್ನಿಯಾದ ಟ್ವೀಟ್ ಒಂದನ್ನು ಹಾಕಿದ್ದಾರೆ.
’’ಇಂದು ರಾತ್ರಿಗೆ ಪ್ಲಾನ್ ಏನು? ನಿಮ್ಮ ಮನೆಯಲ್ಲೋ ಅಥವಾ ನಮ್ಮ ಮನೆಯಲ್ಲೋ?” ಎಂದು ಕೇಳುತ್ತಿರುವ ವಾಟ್ಸಾಪ್ ಸಂದೇಶದ ಸ್ಕ್ರೀನ್‌ಶಾಟ್ ಒಂದನ್ನು ಶೇರ್ ಮಾಡಿಕೊಂಡ ಮುಂಬೈ ಪೊಲೀಸ್, ಇದಕ್ಕೆ ಸ್ಮಾರ್ಟ್ ಆಗಿ ಉತ್ತರ ಕೊಟ್ಟಿರುವುದನ್ನು ತೋರಿದ್ದಾರೆ.
“ನೀನು ನಿನ್ನ ಜಾಗದಲ್ಲಿ, ನಾನು ನನ್ನ ಜಾಗದಲ್ಲಿ” ಎಂದು ಮುಂಬೈ ಪೊಲೀಸರು ಈ ಪ್ರಶ್ನೆಗೆ ಸ್ಪಂದಿಸಿದ್ದು, ಸ್ಕ್ರೀನ್ ಶಾಟ್ ಪೋಸ್ಟ್‌ಗೆ, “ಸಿಂಗಲ್ ಹಾಗೂ ಮಿಂಗಲ್ ಆಗಲು ಸಿದ್ಧ, ಆದರೆ ಆನ್ಲೈನ್‌ನಲ್ಲಿ” ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
https://twitter.com/MumbaiPolice/status/1344485533876105217?ref_src=twsrc%5Etfw%7Ctwcamp%5Etweetembed%7Ctwterm%5E1344485533876105217%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmumbai-police-savagely-shuts-twitter-user-with-smart-reply-on-hilarious-new-year-post-1755368-2021-01-03