ಕೊರೊನಾ ವೈರಸ್ ಎರಡನೇ ಅಲೆಯಿಂದಾಗಿ ದೇಶದ ಜನತೆ ತತ್ತರಿಸಿದ್ದಾರೆ. ಈ ನಡುವೆ ಕೆಲ ಮಹಾನುಭಾವರು ಕೊರೊನಾ ಸಂಕಷ್ಟದಲ್ಲಿರುವವರಿಗೆ ಕೈಲಾದ ಸಹಾಯವನ್ನ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಪ್ಲಾಸ್ಮಾ, ಬೆಡ್ ಹಾಗೂ ಔಷಧಿಗಳ ಅವಶ್ಯಕತೆ ಪೂರೈಸುವಂತೆ ಕೋರಿ ಸಾಕಷ್ಟು ಮನವಿಗಳು ಹರಿದಾಡುತ್ತಲೇ ಇರುತ್ತೆ. ಅವಶ್ಯಕತೆ ಇರುವವರಿಗೆ ಅನೇಕರು ಸಹಾಯ ಮಾಡುತ್ತಿದ್ದಾರೆ.
ಈ ಮಾತಿಗೆ ಉತ್ತಮ ಉದಾಹರಣೆ ಎಂಬಂತೆ ಮುಂಬೈನ ಮಂಟಪ ಶೃಂಗಾರ ಮಾಡುವ ಉದ್ಯಮ ಮಾಡುತ್ತಿದ್ದ ವ್ಯಕ್ತಿ ತಮ್ಮ ಪತ್ನಿಯ ಆಭರಣಗಳನ್ನ ಮಾರಿ ಕೋವಿಡ್ ರೋಗಿಗಳಿಗಾಗಿ ಉಚಿತ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದಾರೆ.
ಪಾಸ್ಕಲ್ ಸಲ್ದಾನಾ ಎಂಬವರು ತಮ್ಮ ಪತ್ನಿಯ ಮನವಿಗೆ ಬೆಲೆ ನೀಡಿ ಏಪ್ರಿಲ್ 18ರಿಂದ ಈ ಸಮಾಜಸೇವೆಯನ್ನ ಆರಂಭಿಸಿದ್ರು. ಇವರ ಪತ್ನಿಯ ಕಿಡ್ನಿ ಫೇಲ್ ಆಗಿರೋದ್ರಿಂದ ಕಳೆದ 5 ವರ್ಷಗಳಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾನು ಏಪ್ರಿಲ್ 18ನೇ ತಾರೀಖಿನಿಂದ ಈ ಕೆಲಸವನ್ನ ಮಾಡುತ್ತಿದ್ದೇನೆ.ಇನ್ನೊಬ್ಬರಿಗೆ ಸಹಾಯ ಮಾಡು ಅಂತಾ ಕೆಲವರು ನನಗೆ ಹಣವನ್ನೂ ನೀಡಿದ್ದಾರೆ ಎಂದು ಪಾಸ್ಕಲ್ ಹೇಳಿದ್ರು.
ನನ್ನ ಪತ್ನಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯಕೀಯ ಆಮ್ಲಜನಕವನ್ನೇ ಉಸಿರಾಡುತ್ತಿದ್ದಾಳೆ. ಹೀಗಾಗಿ ನಮ್ಮ ಮನೆಯಲ್ಲಿ ಯಾವಾಗಲೂ ಒಂದು ಹೆಚ್ಚುವರಿ ಆಮ್ಲಜನಕ ಸಿಲಿಂಡರ್ ಇದ್ದೇ ಇರುತ್ತೆ. ಒಂದಿನ ಶಾಲಾ ಪ್ರಾಂಶುಪಾಲರೊಬ್ಬರು ತಮ್ಮ ಪತಿಗೆ ಆಕ್ಸಿಜನ್ ಬೇಕು ಎಂದು ಮನವಿ ಮಾಡಿದ್ರು. ನನ್ನ ಪತ್ನಿ ಸೂಚನೆಯಂತೆ ನಾನು ನಮ್ಮ ಮನೆಯಲ್ಲಿದ್ದ ಹೆಚ್ಚುವರಿ ಸಿಲಿಂಡರ್ನ್ನು ಅವರಿಗೆ ನೀಡಿದೆ. ಇದಾದ ಬಳಿಕ ನನ್ನ ಪತ್ನಿಯ ಮನವಿಯಂತೆ ಆಕೆಯ ಚಿನ್ನವನ್ನ 80 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿ ಈ ಕೆಲಸ ಆರಂಭಿಸಿದೆ ಎಂದು ಹೇಳಿದ್ರು.
ಪಾಸ್ಕಲ್ ದಂಪತಿಯ ಈ ಮಾನವೀಯ ಕಾರ್ಯಕ್ಕೆ ಸಾಮಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ.