alex Certify ಮೆಚ್ಚುಗೆಗೆ ಕಾರಣವಾಗಿದೆ ಈ ಪುಸ್ತಕ ಪ್ರೇಮಿಯ ಹವ್ಯಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಚ್ಚುಗೆಗೆ ಕಾರಣವಾಗಿದೆ ಈ ಪುಸ್ತಕ ಪ್ರೇಮಿಯ ಹವ್ಯಾಸ

ಪುಸ್ತಕಗಳು ವ್ಯಕ್ತಿಯ ಅತ್ಯುತ್ತಮ ಸ್ನೇಹಿತ ಎಂದು ಹೇಳ್ತಾರೆ. ಈ ಮಾತಿಗೆ ಪುರಾವೆ ಎಂಬಂತೆ ಮುಂಬೈನ ನಿವಾಸಿಯೊಬ್ಬರು ಪುಸ್ತಕ ಒದೋದೇ ತಮ್ಮ ಜೀವನದ ಬಹುದೊಡ್ಡ ಖುಷಿಯ ಸಂಗತಿ ಅಂತಾ ಹೇಳಿಕೊಂಡಿದ್ದಾರೆ.

ಅಂಧೇರಿಯಲ್ಲಿ ಪುಸ್ತಕಗಳ ಪುಟ್ಟ ಅಂಗಡಿಯನ್ನ ಇಟ್ಟುಕೊಂಡಿರುವ ರಾಕೇಶ್​​ಗೆ ಓದೋದು ಅಂದ್ರೆ ಪಂಚಪ್ರಾಣ. ಇವರ ಬಳಿ ಪುಸ್ತಕವನ್ನ ಕೇವಲ 10 ರೂಪಾಯಿ ಪಾವತಿಸಿ ಯಾರು ಬೇಕಿದ್ರೂ ಎರವಲು ಪಡೆಯಬಹುದಾಗಿದೆ. ಆದರೆ ಪುಸ್ತಕವನ್ನ ಓದಿದ ಬಳಿಕ ಗ್ರಾಹಕರು ಅದನ್ನ ಸುರಕ್ಷಿತವಾಗಿ ಹಿಂದಿರುಗಿಸಬೇಕೆಂದು ರಾಕೇಶ್​ ಕೇಳಿಕೊಳ್ತಾರೆ.

ರಾಕೇಶ್​ರ ಪುಸ್ತಕ ಪ್ರೇಮದ ಬಗ್ಗೆ ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ. ರಾಕೇಶ್​ ಪ್ರಕಾರ ಜನರು ಹಣ ಮಾಡೋದೇ ತಮ್ಮ ಆಸೆಗಳನ್ನ ಈಡೇರಿಸಿಕೊಳ್ಳೋಕೆ. ರಾಕೇಶ್​​ ಜೀವನದ ಪರಮ ಆಸೆ ಅಂದ್ರೇನೆ ಪುಸ್ತಕಗಳನ್ನ ಓದೋದು. ನನಗೆ ಈ ಖುಷಿ ಪುಟ್ಟ ಅಂಗಡಿಯಿಂದ ಸಿಕ್ಕಿದೆ ಅಂದ್ಮೇಲೆ ನಾನ್ಯಾಕೆ ಹಣದ ಹಿಂದೆ ಹೋಗಲಿ ಅಂತಾರೆ ಸೆಕೆಂಡ್ ಹ್ಯಾಂಡ್​ ಪುಸ್ತಕ ಅಂಗಡಿ ಮಾಲೀಕ ರಾಕೇಶ್.

ಲಾಕ್​ಡೌನ್​ ಸಂದರ್ಭದಲ್ಲಿ ಅನೇಕರು ರಾಕೇಶ್​ ಜೀವನೋಪಾಯಕ್ಕೆ ಸಹಾಯ ಮಾಡಲು ಬಂದರೂ ಸಹ ಅದನ್ನ ರಾಕೇಶ್​ ನಯವಾಗಿ ತಿರಸ್ಕರಿಸಿದ್ದಾರಂತೆ. ಎಡಗೈಯನ್ನೂ ಕಳೆದುಕೊಂಡಿರುವ ರಾಕೇಶ್​ರ ಪುಸ್ತಕ ಪ್ರೇಮಕ್ಕೆ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...