alex Certify ಸೈಕಲ್​ನ್ನೇ ಹೋಟೆಲ್​ ಮಾಡಿಕೊಂಡ ಈ ಬಾಣಸಿಗ ಫುಲ್‌ ಫೇಮಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಕಲ್​ನ್ನೇ ಹೋಟೆಲ್​ ಮಾಡಿಕೊಂಡ ಈ ಬಾಣಸಿಗ ಫುಲ್‌ ಫೇಮಸ್….!

ಹಾರುವ ದೋಸೆ, ಹಾರುವ ವಡಾಪಾವ್​ ಹೀಗೆ ವಾಣಿಜ್ಯ ನಗರಿ ಮುಂಬೈ ಹೊಸ ಬಗೆಯ ಖಾದ್ಯ ತಯಾರಿ ಮಾಡುವವರ ಮೂಲಕವೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡ್ತಿದೆ.‌ ಇದೀಗ ಈ ಸಾಲಿನ ಇನ್ನೊಬ್ಬ ಬಾಣಸಿಗ ಸೇರ್ಪಡೆಯಾಗಿದ್ದಾರೆ.

ಇದೊಂದು ಹಳೆಯ ವಿಡಿಯೋ ಆಗಿದ್ದರೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ವ್ಯಕ್ತಿಯೊಬ್ಬರು ತಮ್ಮ ಸೈಕಲ್​ನಲ್ಲೇ ಪಿಜ್ಜಾ ದೋಸೆಯನ್ನ ತಯಾರಿಸಿಕೊಡುವ ವಿಡಿಯೋ ಇದಾಗಿದೆ.

ಸೈಕಲ್​ ದೋಸಾ ವಾಲಾ ಎಂಬ ಹೆಸರಿಂದಲೇ ಫೇಮಸ್​ ಆಗಿರುವ ಈ ವ್ಯಕ್ತಿ ದಕ್ಷಿಣ ಭಾರತದ ಖಾದ್ಯಗಳನ್ನ ಕಳೆದ 25 ವರ್ಷಗಳಿಂದ ತಯಾರಿಸುತ್ತಿದ್ದಾರೆ. ಇವರ ಸೈಕಲ್​ನ ಹಿಂದೆ ದೋಸಾ ತವಾ ಇಡಲಾಗಿದ್ದು ಅದರ ಮೇಲೆ ದೋಸೆಯನ್ನ ಮಾಡ್ತಾರೆ. ಈ ವಿಡಿಯೋವನ್ನ ಆಮ್ಚಿ ಮುಂಬೈ ಎಂಬ ಯುಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದೆ. ಈ ವಿಡಿಯೋ ಸಖತ್​ ವೈರಲ್​ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...