ಕೋವಿಡ್-19 ಸೋಂಕಿನಿಂದ ಲಾಕ್‌ಡೌನ್ ಆಗಿರುವ ಭಾರತೀಯ ರೈಲ್ವೇಯ ಪ್ರಯಾಣಿಕ ಸೇವೆಗಳನ್ನು ಹಂತಹಂತವಾಗಿ ಸಹಜ ಸ್ಥಿತಿಗೆ ಮರಳಿಸುವ ಯತ್ನಗಳು ಚಾಲ್ತಿಯಲ್ಲಿವೆ.
ಇದೇ ವೇಳೆ ಮುಂಬಯಿ ಲೋಕಲ್ ರೈಲುಗಳಲ್ಲಿ ಚಿಕ್ಕ ಮಕ್ಕಳ ಓಡಾಟಕ್ಕೆ ನಿಷೇಧವನ್ನು ಹೇರಿರುವ ರೈಲ್ವೇ ಇಲಾಖೆ, ಕೋವಿಡ್-19 ಸೋಂಕಿನ ಎರಡನೇ ಅಲೆಯ ಸಾಧ್ಯತೆಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಇದೇ ವೇಳೆ, ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಹಾಗೂ ಸಂಜೆ 7 ಗಂಟೆಯ ನಂತರ ನಿಗದಿತ ಅವಧಿಯೊಳಗೆ ಲೋಕಲ್ ರೈಲುಗಳಲ್ಲಿ ಮಹಿಳೆಯರು ಸಂಚರಿಸಲು ಅವಕಾಶ ಕೊಡಲಾಗಿದೆ. ಮಕ್ಕಳಿರುವ ಹೆಂಗಸರಿಗೂ ಸಹ ಪ್ರಯಾಣ ಮಾಡದಂತೆ ಇಲಾಖೆ ನಿಷೇಧ ಹೇರಿದೆ.
ಮಾಯಾನಗರಿಯ ಲೈಫ್‌ಲೈನ್ ಆಗಿರುವ ಉಪನಗರ ರೈಲು ಸೇವೆಯು ಕಳೆದ ಏಳು ತಿಂಗಳುಗಳಿಂದ ಪೂರ್ಣ/ಭಾಗಶಃ ಸ್ಥಬ್ಧವಾಗಿದ್ದು, ಸಾಮಾನ್ಯ ಜನರ ಸಂಚಾರಕ್ಕೆ ಭಾರೀ ತೊಂದರೆಯಾಗುತ್ತಿದೆ.